ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ. (ಎಸ್ ಪಿ ವೈ ಎಸ್ ಎಸ್) ವತಿಯಿಂದ ಪ್ರಥಮ ಬಾರಿಗೆ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಕಿಲ್ಲೆ ಮೈದಾನದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಂಬಿಕಾ ವಿದ್ಯಾಲಯ ಸಮೂಹ ಸಂಸ್ಥೆಗಳ ಕಾರ್ಯದರ್ಶಿಸುಬ್ರಹ್ಮಣ್ಯ ನಟ್ಟೋಜ ,ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರು ಮತ್ತು ಯೋಗ ಶಿಕ್ಷಕರು ಆಫೀಸರ್ಸ್ ಕ್ಲಬ್ ಶಾಖೆಯ ದಯಾನಂದ ಹಾಗೂ ಎಸ್.ಪಿ.ವೈ.ಎಸ್. ಎಸ್. ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಸಮಿತಿಯ 390ಕ್ಕೂ ಮಿಕ್ಕಿದ ಯೋಗ ಬಂದುಗಳು, ವೀರಯೋಧರಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಯೋಧ ದಯಾನಂದ , ಸುಬೇದಾರ್ ನೀಲಪ್ಪ ಪೊಲೀಸ್ , ಸುಬೇದಾರ್ ಎಡ್ವರ್ಡ್ ಡಿಸೋಜಾ , ಹವಾಲ್ದಾರ್ ವಸಂತ ದೇವಸ್ಯ, ಸುಬೇದಾರ್ ಕೆ ಮೋಹನ್ ಗೌಡ , ಹವಾಲ್ದಾರ್ ಕೆ ಸಿದ್ದಣ್ಣ ಗೌಡ ,ಜಗನ್ನಾಥ ರೈ,ಸುಬೇದಾರ್ ನಾಗಪ್ಪ ಗೌಡ,ಸಾರ್ಜೆಂಟ್ ಸುರೇಶ್ ಕೆ.ಯು. ರಾಮಚಂದ್ರ ಪುಚ್ಚೇರಿ,ಎಂ.ಕೆ.ನಾರಾಯಣ ಭಟ್,ಪ್ರಕಾಶ್ ಕುಮಾರ್ ನಾಯಕ್,ಗೀರಿಶ್ ನಂದನ್ವ ಇವರನ್ನು ಗೌರವಿಸಲಾಯಿತು.
ಪ್ರಾಂತ ಪ್ರತಿನಿಧಿ ಶಿವಾನಂರೈ ,ತಾಲೂಕು ಸಂಚಾಲಕ ಯೋಗೀಶ್, ಪುತ್ತೂರು ನಗರ ಪ್ರಮುಖರಾದ ಪ್ರದೀಪ್ ಉಪ್ಪಿನಂಗಡಿ,ಲೋಕನಾಥ್ ಬಜಪೆ,ಬಾಲಕೃಷ್ಣ ಸುಂದರ,ರಾಜಣ್ಣ,ಜನಾರ್ದನ,ಸಂತೋಷ, ರಾಧಾಕೃಷ್ಣ, ಶಾಂತಕುಮಾರ್,ಸದಾಶಿವ, ಸಂಜೀವ,ವೀಣಾ,ಸುಲತ,ರಶ್ಮಿ, ಉಪಸ್ಥಿತರಿದ್ದರು.
ಗೀತಾ ಸ್ವಾಗತಿಸಿ,ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸಂಚಾಲಕ ರಾಮಚಂದ್ರ ವಂದನಾರ್ಪಣೆ ಮಾಡಿದರು.