ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ಏಜೆಂಟರುಗಳ ಹಾಗೂ ಪತ್ರಿಕಾ ವಿತರಕರ ಸಭೆ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಬ್ಯಾಂಕ್ವೆಟ್ ಹಾಲ್ನಲ್ಲಿ ಜು.30ರಂದು ನಡೆಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ ಸುದ್ದಿ ಬಿಡುಗಡೆ ಪತ್ರಿಕೆ ಜನಸಾಮಾನ್ಯರ ಪತ್ರಿಕೆಯಾಗಿ ಬೆಳೆದಿದೆ. ಇದರ ಬೆಳವಣಿಗೆಯಲ್ಲಿ ಪತ್ರಿಕಾ ಏಜೆಂಟರುಗಳು ಹಾಗೂ ಪತ್ರಿಕೆ ವಿತರಕರು ಮುಖ್ಯ ಪಾತ್ರವನ್ನು ವಹಿಸಿದವರು. ಪತ್ರಿಕೆ ವಿತರಣೆ ಮಾಡುವುದು ಕೀಳು ಮಟ್ಟದ ವೃತ್ತಿಯಲ್ಲ ಅದಕ್ಕೂ ಒಂದು ಗೌರವವಿದೆ. ನಮ್ಮ ಪತ್ರಿಕೆಯಲ್ಲಿರುವ ವರದಿಗಾರರು ವೃತ್ತಿಪರರಲ್ಲ. ವಿತರಕರಾಗಿ ಹಾಗೂ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿ ವರದಿಗಾರರಾದವರೂ ಇದ್ದಾರೆ ಎಂದು ಹೇಳಿದರು.
ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಸಿಇಒ ಸೃಜನ್ ಊರುಬೈಲು ಮಾತನಾಡಿ ಪತ್ರಿಕೆಯ ಬೆಳವಣಿಗೆಯಲ್ಲಿ ಏಜೆಂಟರುಗಳೂ ಭಾಗಿಯಾಗಿದ್ದಾರೆ. ಪತ್ರಿಕೆಗೆ ಜಾಹೀರಾತು, ವರದಿಗಳು ಬರುವಂತೆ ಮಾಡುವುದರಲ್ಲಿಯೂ ಏಜೆಂಟರುಗಳು ಕಾರ್ಯನಿರ್ವಹಿಸಬೇಕು. ಪತ್ರಿಕೆಯ ಪ್ರಸರಣ ಹಾಗೂ ಪತ್ರಿಕೆಯ ಅಭಿವೃದ್ಧಿಯನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಹೇಳಿದರು. ಸುದ್ದಿ ಯೂಟ್ಯೂಬ್ ಚಾನೆಲ್ ಬಗ್ಗೆ ಮಾತನಾಡಿ ಚಾನೆಲ್ನಲ್ಲಿ ವಿಶೇಷವಾದ ಸ್ಟೋರಿ, ವರದಿ ಪ್ರಸಾರ ಮಾಡುವಲ್ಲಿಯೂ ಶ್ರಮಿಸುತ್ತಿದ್ದೇವೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ನಿಯೋಜಿತ ಸಂಪಾದಕ ಕರುಣಾಕರ್ ರೈ ಸಿ.ಎಚ್. ಮಾತನಾಡಿ ಪತ್ರಿಕೆಯಲ್ಲಿ ವರದಿಯ ಜೊತೆಗೆ ವಿಶೇಷವಾದ ಅಂಕಣವನ್ನು ಪ್ರಕಟಿಸಲಾಗುವುದು. ಆರೋಗ್ಯ, ಶಿಕ್ಷಣ, ವಿದ್ಯಾರ್ಥಿಗಳ ಅಂಕಣ, ಕಾನೂನು, ವೈದ್ಯಕೀಯ ಅಲ್ಲದೆ ಮಹಿಳೆಯರಿಗೆ ವಿಶೇಷ ಮಾಹಿತಿ ಅಂಕಣ ಪ್ರಾರಂಭಿಸಲಾಗುವುದು ಎಂದು ಹೇಳಿ ವರದಿಗಳ ಬಗ್ಗೆ ಮಾಹಿತಿ ನೀಡಿದರು.
ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 35 ವರ್ಷಗಳಿಂದ ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ. ಸುದ್ದಿ ಪತ್ರಿಕೆಯು ವರದಿ, ಜಾಹೀರಾತಿಗೆ ಸೀಮಿತವಾಗದೆ ಮಾಹಿತಿ ಆಧಾರಿತ ಪತ್ರಿಕೆಯಾಗಿ ಬೆಳೆದಿದೆ. ಪತ್ರಿಕೆ ವರದಿ ಜೊತೆಗೆ ಜಾಗೃತಿ ಆಂದೋಲನ ಕೂಡ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧದ ಆಂದೋಲನ, ಸಾಮಾಜಿಕ ಜಾಲತಾಣ ದುರುಪಯೋಗ ಮುಂತಾದ ಜಾಗೃತಿ ಆಂದೋಲನ ಮಾಡುತ್ತಿದೆ. ಪತ್ರಿಕೆಯು ನಿಂತ ನೀರಾಗದೆ ಬದಲಾವಣೆಯಲ್ಲಿ ಬರಬೇಕು. ಈಗಿನ ಮೌಲ್ಯಗಳ ಜೊತೆಗೆ ಹೊಸ ಬದಲಾವಣೆಯಾಗಬೇಕಾಗಿದೆ. ಪತ್ರಿಕೆ, ಚಾನೆಲ್, ವೆಬ್ಸೈಟ್, ಇ-ಪೇಪರ್, ಇವುಗಳ ಬೆಳವಣೆಯಲ್ಲಿ ನಮ್ಮ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ವರದಿಗಾರ ರಾಜೇಶ್ ಎಂ.ಎಸ್. ಮಾತನಾಡಿ ಸುದ್ದಿ ಸಮೂಹ ಸಂಸ್ಥೆಯು ಕೃಷಿಕರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರವನ್ನು ಆರಂಭಿಸಿದೆ. ಕೃಷಿಕರ ಯಾವುದೇ ಉತ್ಪನ್ನಗಳಿಗೆ ಈ ಕೇಂದ್ರದ ಮೂಲಕ ಮಾರಾಟ ವ್ಯವಸ್ಥೆ ಮಾಡಲಾಗುವುದು. ಯಾವುದೇ ವಿಭಾಗದ ಮಾರಾಟ ಅಥವಾ ಖರೀದಿ ಮಾಹಿತಿಯನ್ನು ಪತ್ರಿಕೆಯಲ್ಲಿ ಉಚಿತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾಹೀರಾತು ವಿಭಾಗದ ಮುಖ್ಯಸ್ಥೆ ಶೈಲಜಾ ಸುದೇಶ್ ಮಾತನಾಡಿ ಪತ್ರಿಕೆ ನಡೆಯಬೇಕಾದರೆ ಜಾಹೀರಾತು ಕೂಡ ಮುಖ್ಯ. ನೀವು ಕೊಡುವ ಮಾಹಿತಿ, ವರದಿ, ಜಾಹೀರಾತಿನ ಮೇಲೆ ಪತ್ರಿಕೆ ನಿಂತಿದೆ. ಯಾವುದೇ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿ ಜಾಹೀರಾತಿನ ಮಾಹಿತಿ ನೀಡಿದರು.
ಸುದ್ದಿ ನ್ಯೂಸ್ ಚಾನೆಲ್ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಮಾತನಾಡಿ ಸುದ್ದಿ ಚಾನೆಲ್ ಕೂಡ ಸುದ್ದಿ ಸಮೂಹ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತಿರಂಜನೆ, ಉತ್ಪ್ರೇಕ್ಷೆ ಇಲ್ಲದೆ ಚಾನೆಲ್ ವರದಿ ಪ್ರಸಾರ ಮಾಡುತ್ತಿದೆ. ಪುತ್ತೂರು ಕೇಂದ್ರವಾಗಿರಿಸಿ ಚಾನೆಲ್ ಇದೆ. ಚಾನೆಲ್ನಲ್ಲಿ ದೈನಂದಿನ ಕಾರ್ಯಕ್ರಮಗಳು, ಸಂವಾದ, ಸಾಕ್ಷ್ಯಚಿತ್ರಗಳ ಪ್ರಸಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರಸರಣ ವಿಭಾಗದ ಮುಖ್ಯಸ್ಥ ಪ್ರಜ್ವಲ್ ಬೇಕಲ್ ಮಾತನಾಡಿ ಏಜೆಂಟರು ಹಾಗೂ ಪತ್ರಿಕೆ ವಿತರಕರ ಮೇಲೆ ಪತ್ರಿಕೆ ನಿಂತಿದೆ. ಯಾವುದೇ ಮಾಹಿತಿಗಳು ನಿಮಗೆ ಮೊದಲು ತಿಳಿಯುತ್ತದೆ. ಪತ್ರಿಕೆ ಹಾಕುವುದು, ವಿತರಣೆ ಮಾಡುವುದು ಕಷ್ಟದ ಕೆಲಸ. ನಿಮ್ಮ ಕೆಲಸದೊಂದಿಗೆ ನಾವು ಸದಾ ಇದ್ದೇವೆ. ಯಾವುದೇ ವಿಶೇಷ ಘಟನೆಗಳಾದಾಗ ಪತ್ರಿಕೆಯ ಪ್ರಸರಣದಲ್ಲಿಯೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಪತ್ರಿಕೆ ವಿತರಕರಾದ ಗೌತಮ್, ಗಣೇಶ್ ಆಚಾರ್ಯ, ಬೆಳ್ಳಾರೆ ಏಜೆಂಟ್ ರಾಜೇಶ್, ಆಲಂಕಾರು ಏಜೆಂಟ್ ಲೋಕೇಶ್ರವರು ಪತ್ರಿಕೆ ಅಭಿವೃದ್ಧಿ ಬಗ್ಗೆ ತಿಳಿಸಿ ಹಾಗೂ ಅನಿಸಿಕೆ ವ್ಯಕ್ತಪಡಿಸಿದರು. ಸೆಲ್ಕೋ ಸೋಲಾರ್ನ ಉಮೇಶ್ ರೈ ಕೈಕಾರ ಸೋಲಾರ್ ಬಗ್ಗೆ ಮಾಹಿತಿ ನೀಡಿದರು.
ಏಜೆಂಟರುಗಳಾದ ಅನಿತಾ ರಾಜಪ್ಪ ವಳಾಲು, ಸಂಜೀವ ನಾಯಕ್ ಕೃಷ್ಣನಗರ, ವಿಶ್ವನಾಥ ರೈ ತೆಗ್ಗು, ಸೂರಪ್ಪ ಗೌಡ ನಂದಿನಿ ಸ್ಟಾಲ್ ಬಸ್ ಸ್ಟಾಂಡ್, ದಯಾನಂದ ಭಕ್ತಕೋಡಿ, ವಿಜಯ ಸಾಮೆತ್ತಡ್ಕ, ಪದ್ಮಯ್ಯ ಗೌಡ ಬರೆಪ್ಪಾಡಿ, ಲೊಕೇಶ್ ಶೆಟ್ಟಿ ಆಲಂಕಾರು, ಖಾದ್ರಿ ಬ್ಯಾರಿ ಸೂರ್ಯ, ಹಸೈನಾರ್ ಕಡಬ, ಆಲಿಕುಂಞ ತಂಬುತ್ತಡ್ಕ, ರೇಖಾ ಶೆಣೈ ನೇರಳಕಟ್ಟೆ, ದಯಾನಂದ ಮುರ, ರಾಜೇಶ್ ಬಿ.ಕಾವು. ಪ್ರಜ್ವಲ್, ಮಾಧವ ರೈ ಅಜಲಡ್ಕ, ಬಾಲಕೃಷ್ಣ ಗೌಡ ಕೆದಿಲ, ಭರತ್ ಪಂಜಳ, ಜಯರಾಮ ರೈ ಈಶ್ವರಮಂಗಲ, ಹರಿಣಾಕ್ಷಿ ಬೆಳಂದೂರು, ಅಬ್ದುಲ್ ರಝಾಕ್ ಪಿಲಿಪಂಜರ, ಮೆಲ್ವಿನ್ ಮೊಂತೆರೋ ಕುಂಬ್ರ, ಗಣೇಶ್ ಬನ್ನೂರು, ಉಮೇಶ್ ಬೆಳ್ಳಾರೆ, ಗೌತಮ್,ರಾಮಚಂದ್ರ ಶೆಣೈ ಕೆಮ್ಮಿಂಜೆ, ಅಣ್ಣು ಗೌಡ ಗುಮ್ಮಟಗದ್ದೆ, ಜಯಂತ್ ಜಲಾಡಿ, ಶೇಖರ್ ಪಟ್ಟೆ, ಅಮ್ಮಾಜಿ ಪಡೀಲ್, ಗೋಪಾಲ ಬೇರಿಕೆ,ಸದಾಶಿವ ಹಿರೆಬಂಡಾಡಿ,ಬಾಬು ಗೌಡ ಕೋಡಿಂಬಾಡಿ, ಗೋಪಾಲಕೃಷ್ಣ ಮಿತ್ತೂರು, ಸಂಧ್ಯಾ, ವಿಜಯ, ಶ್ರೀಧರ ಗೌಡ ಬೊಳುವಾರು, ಅಬೂಬಕ್ಕರ್ ಕೌಡಿಚ್ಚಾರ್, ನಾರಾಯಣ ಗೌಡ ಅಮ್ಚಿನಡ್ಕ, ಹರೀಶ್ ಕುಮಾರ್ ಪೊಪ್ಯುಲರ್, ದಿನಕರ್ ಆಚಾರ್ಯ ಸುಭಾಷ್ ನಗರ, ಯೊಗೀಶ್, ಕೃಷ್ಣಪ್ಪ ಗೌಡ ರೆಂಜ, ರಾಧಾಕೃಷ್ಣ ಭಟ್ ಬೊಳ್ವಾರು, ರವೀಶ್ ಕನ್ಯಾನ, ಅಬ್ದುಲ್ ರಹಿಮಾನ್ ಆನಾಜೆ, ಉಮೇಶ್ ಗೌಡ ಕನ್ನಾಯ, ಜಯಲಕ್ಷ್ಮಿ, ಯೋಗೀಶ್ ಸಂಟ್ಯಾರು, ಕೃಷ್ಣಕುಮಾರ್ ಇದ್ಯಪೆ, ಹೇಮಂತ್, ವಿಶಾಲ್ ಕೆಮ್ಮಾಯಿ, ಮಹೇಶ್, ಹರಿಪ್ರಸಾದ್ ಮುರ, ವಿಶ್ವನಾಥ್, ಗಿರಿಯಪ್ಪ ಬಿಳಿನೆಲೆ, ವರದಿಗಾರರಾದ ಯತೀಶ್ ಉಪ್ಪಳಿಗೆ, ನಿಶಾಕಿರಣ್ ಬಾಳೆಪುಣಿ, ಶಿವಕುಮಾರ್ ಈಶ್ವರಮಂಗಲ, ಉಮಾಪ್ರಸಾದ್ ರೈ ನಡುಬೈಲು, ಸದಾಶಿವ ಶೆಟ್ಟಿ ಮಾರಂಗ, ಸಂತೋಷ್ ಮೊಟ್ಟೆತ್ತಡ್ಕ, ಯೂಸುಫ್ ರೆಂಜಲಾಡಿ, ಲೋಕಯ್ಯ ಉಪ್ಪಿನಂಗಡಿ, ಚಂದ್ರಕಾಂತ್ ಉರ್ಲಾಂಡಿ, ರಾಜೇಶ್ ಸಂಪ್ಯಾಡಿ, ತಾರನಾಥ್, ಸಿಬಂದಿಗಳಾದ ಪ್ರಚಲಿತ, ನವ್ಯಾ ಉಪಸ್ಥಿತರಿದ್ದರು. ವರದಿಗಾರ ಶರತ್ ಕುಮಾರ್ ಪಾರ ವಂದಿಸಿದರು. ಹಿರಿಯ ವರದಿಗಾರ ಹರೀಶ್ ಬಾರಿಂಜ ಕಾರ್ಯಕ್ರಮ ನಿರೂಪಿಸಿದರು.
ಇತ್ತೀಚೆಗೆ ನಿಧನರಾದ ಪ್ರಸರಣ ವಿಭಾಗದ ಮುಖ್ಯಸ್ಥ ರವೀಂದ್ರ ಕಬಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಸರಣ ವಿಭಾಗದ ಮುಖ್ಯಸ್ಥ ಜಯರಾಮ್ ಭಟ್ಗೆ ಸನ್ಮಾನ
ಸುಮಾರು 30 ವರ್ಷಗಳಿಂದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಸರಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯರಾಮ್ ಭಟ್ರವರನ್ನು ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಶಾಲು, ಪೇಟ, ಸ್ಮರಣಿಕೆ ನೀಡಿ ಡಾ.ಯು.ಪಿ.ಶಿವಾನಂದರವರು ಸನ್ಮಾನಿಸಿದರು. ವರದಿಗಾರ ಸಿ.ಶೇ.ಕಜೆಮಾರ್ ಸನ್ಮಾನಗೊಂಡ ಜಯರಾಮ್ ಭಟ್ರವರ ಬಗ್ಗೆ ಮಾತನಾಡಿ ಜಯರಾಮ್ ಭಟ್ರವರು ಓರ್ವ ಸರಳ ಸಜ್ಜನಿಕೆಯ ವ್ಯಕ್ತಿ. ಮನೆ ಮನೆಗೆ ತೆರಳಿ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದರು. ಪುತ್ತೂರು ಅಲ್ಲದೆ ಮಂಗಳೂರಿನಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಸೈಕಲ್ನಲ್ಲಿ ಓಡಾಟ ನಡೆಸಿಕೊಂಡು ಪ್ರಸರಣ ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸುದ್ದಿ ಎಂದರೆ ಜಯರಾಮ್ ಭಟ್ ಎಂದು ಜನರು ಗುರುತಿಸುತ್ತಿದ್ದರು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯರಾಮ್ ಭಟ್ರವರು ಪತ್ರಿಕೆ ನಮ್ಮೆಲ್ಲರ ಉಸಿರು. ನಿಮ್ಮ ಅಭಿಮಾನದಿಂದ ನನಗೆ ತುಂಬಾ ಖುಷಿಯಾಯಿತು ಎಂದು ಹೇಳಿದರು. ಪತ್ರಿಕೆ ಬೆಳೆದು ಬಂದ ಹಾದಿಯನ್ನು ತಿಳಿಸಿ ಕೃತಜ್ಞತೆ ಸಲ್ಲಿಸಿದರು.
ಲಂಚ ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞಾ ಸ್ವೀಕಾರ
ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ನಡೆಸಲಾಗುತ್ತಿರುವ ಲಂಚ ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು. ಸಂತೋಷ್ ಕುಮಾರ್ ಶಾಂತಿನಗರ ಪ್ರತಿಜ್ಞಾ ವಿಧಿ ಬೋಧಿಸಿದರು.