ಅಧ್ಯಕ್ಷರಾಗಿ ಮುಹಮ್ಮದ್ ಬೋಳ್ವಾರ್, ಪ್ರ.ಕಾರ್ಯದರ್ಶಿ: ಅಬ್ದುಲ್ ಹಮೀದ್, ಕೋಶಾಧಿಕಾರಿ ಇಬ್ರಾಹಿಂ ಬಾತಿಷಾ
ಪುತ್ತೂರು: ಎನ್ಆರ್ಐ ಪ್ರವಾಸಿಗರು ಕಲ್ಲೇಗ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಕಲ್ಲೇಗ ಮಸೀದಿಯಲ್ಲಿ ಆನ್ಲೈನ್ ಮೂಲಕ ನಡೆಸಲಾಯಿತು. ಬಿ.ಎ.ಶಕೂರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಲ್ಲೇಗ ಮುದರ್ರಿಸ್ ಶಾಫಿ ಫೈಝಿ ಇರ್ಫಾನಿ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎನ್ಆರ್ಐ ಪ್ರವಾಸಿಗರು, ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಅಲ್ ಅಮೀನ್ ಯಂಗ್ ಮೆನ್ಸ್ನ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಿತಿಯ ಅಧ್ಯಕ್ಷ ಸುಲೈಮಾನ್ ಉಸ್ತಾದ್ ಮಾತನಾಡಿದರು. ಜಮಾಅತ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ಆರ್ಐ ಪ್ರವಾಸಿಗರು ಕಲ್ಲೇಗ ಸಮಿತಿ ಕಳೆದ ಆರು ವರ್ಷಗಳಲ್ಲಿ ನಡೆದು ಬಂದ ಹಾದಿಯ ಬಗ್ಗೆ ಶಕೂರ್ ಹಾಜಿ ಮಾಹಿತಿ ನೀಡಿದರು. ಬಳಿಕ ಆನ್ಲೈನ್ ಮೂಲಕ ಎನ್ಆರ್ಐ ಪ್ರವಾಸಿಗರು ಕಲ್ಲೇಗ ಸಮಿತಿಯ ಏಳನೇಯ ವರ್ಷದ ಮಹಾಸಭೆ ಮುಂದುವರಿಯಿತು. ಬಶೀರ್ ಹಾಜಿ ಕಬಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಾನಿಫ್ ಬೊಳ್ವಾರ್ ಸಿ ಅವರು ವರದಿ ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ರಹಿಮಾನ್ (ಅದ್ದು ಪೋಳ್ಯ) ಲೆಕ್ಕಪತ್ರ ಮಂಡಿಸಿದರು.
ಗೌರವಾಧ್ಯಕ್ಷರಾಗಿ ಶಕೂರ್ ಹಾಜಿ ಕಲ್ಲೇಗ, ಅಧ್ಯಕ್ಷರಾಗಿ ಮುಹಮ್ಮದ್ ಬೊಳ್ವಾರ್ ಕುವೈಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಬಕ (ದಮ್ಮಾಮ್) ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಂ ಬಾತಿಷಾ ಕಬಕ ಕತ್ತರ್ ಆಯ್ಕೆಯಾಗಿದ್ದಾರೆ. ಮಾರ್ಗದರ್ಶಕರಾಗಿ ಕಲ್ಲೇಗ ಮಸೀದಿಯ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ ಕಲ್ಲೇಗ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಿದ್ದೀಕ್ ಕಲ್ಲೇಗ (ಮಾಹಿ), ಝಕರಿಯಾ ಮುರ, ಅಸೀಫ್ ಕಬಕ, ಹಾಗೂ ರಫೀಕ್ ಬೊಳ್ವಾರ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹಿಮಾನ್ ಪೋಳ್ಯ (ಕುವೈಟ್), ಶಾಫಿ ಮಂಜಲ್ಪಡ್ಪು (ಕತ್ತಾರ್), ಸಿದ್ದೀಕ್ ಕಲಂಬಿ ದುಬೈ, ಅಬ್ದುಲ್ ರಝಾಕ್ ಕಬಕ ರಿಯಾದ್, ಖಲಂದರ್ ಕಬಕ ರಿಯಾದ್, ಸವಾದ್ ಶಾಂತಿನಗರ ಅಜ್ಮಾನ್ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಮುನೀರ್ ಶಾಂತಿನಗರ, ಸಂಚಾಲಕರಾಗಿ ಅಬ್ದುಲ್ ಲತೀಫ್ ಹಾಜಿ ಕಲ್ಲೇಗ, ಪತ್ರಿಕಾ ಕಾರ್ಯದರ್ಶಿಯಾಗಿ ಇಕ್ಬಾಲ್ ಅಜೇಯ ನಗರ ಆಯ್ಕೆಯಾದರು.
ಊರಿನ ಪ್ರತಿನಿಧಿಯಾಗಿ ಹನೀಫ್ ಹಾಜಿ ಉದಯ ಮತ್ತು ಫಾರೂಕ್ ಮುರ, ಗ್ರೂಪ್ ನಿರ್ವಹಕರಾಗಿ (ಎಡ್ಮಿನ್ )ಇಬ್ರಾಹಿಂ ಕಲ್ಲೇಗ ದಮಾಮ್ ಆಯ್ಕೆಯಾದರು. ಸಲಹೆಗಾರರಾಗಿ ಸುಲೈಮಾನ್ ಉಸ್ತಾದ್, ಬಶೀರ್ ಹಾಜಿ ಕಬಕ, ಮೊಯಿದು ಬೊಳ್ವಾರ್, ಮುಹಮ್ಮದ್ ರಫೀಕ್ (ಅಕ್ಕಿ ಬನಾರಿ)ದಮಾಮ್, ಅಬ್ದುಲ್ ಸಮದ್ ಹಾಜಿ ಕಲ್ಲೇಗ, ಫರಾಝ್ ಅಬ್ದುಲ್ ಖಾದರ್, ಶಾಹುಲ್ ಹಮೀದ್ ಹಾರಾಡಿ ಆಯ್ಕೆಯಾದರು. ನೂತನ ಕೋಶಾಧಿಕಾರಿ ಇಬ್ರಾಹಿಂ ಬಾತಿಷಾ ವಂದಿಸಿದರು. ಶಕೂರ್ ಹಾಜಿ ಕಲ್ಲೆಗ ಕಾರ್ಯಕ್ರಮ ನಿರೂಪಿಸಿದರು.