ಪುತ್ತೂರು: ಪುಣಚ ಗ್ರಾಮ ಪಂಚಾಯತ್‌ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಆ.8 ರಂದು ಬೆಳಿಗ್ಗೆ ಪುಣಚ ಗ್ರಾಮ ಪಂಚಾಯತ್‌ನ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಲಿದೆ.ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಲಿದ್ದಾರೆ. ಗ್ರಾಮ ಸಭೆಯು ಪ್ರಯುಕ್ತ ಆ.2 ರಿಂದ ವಾರ್ಡ್‌ಸಭೆಗಳು ನಡೆಯಲಿದೆ.
ಆ.2 ರಂದು ಬೆಳಿಗ್ಗೆ 1 ನೇ ವಾರ್ಡ್‌ನ ವಾರ್ಡ್‌ಸಭೆಯು ಗ್ರಾಪಂ ಸದಸ್ಯೆ ಗಂಗಮ್ಮರವರ ಅಧ್ಯಕ್ಷತೆಯಲ್ಲಿ ಅಜ್ಜಿನಡ್ಕ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ.3 ನೇ ವಾರ್ಡ್‌ನ ಸಭೆಯು ಸದಸ್ಯೆ ಸುಜಾತರವರ ಅಧ್ಯಕ್ಷತೆಯಲ್ಲಿ ಆ.2 ರಂದು ಅಪರಾಹ್ನ ದೇವಿನಗರ ಅಂಗನವಾಡಿಯಲ್ಲಿ ನಡೆಯಲಿದೆ. 2 ನೇ ವಾರ್ಡ್‌ನ ಸಭೆಯು ಸದಸ್ಯ ಹರೀಶ್‌ರವರ ಅಧ್ಯಕ್ಷತೆಯಲ್ಲಿ ಆ.3 ರಂದು ಬೆಳೀಗ್ಗೆ ಬರೆಂಜ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.4 ನೇ ವಾರ್ಡ್‌ನ ಸಭೆಯು ಸದಸ್ಯ ತೀರ್ಥಾರಾಮರವರ ಅಧ್ಯಕ್ಷತೆಯಲ್ಲಿ ಆ.5 ರಂದು ಬೆಳಿಗ್ಗೆ ತೋರಣಕಟ್ಟೆ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ. 5 ನೇ ವಾರ್ಡ್‌ನ ಸಭೆಯು ಆ.5 ರಂದು ಅಪರಾಹ್ನ ಸದಸ್ಯ ರಾಜೇಶ್‌ರವರ ಅಧ್ಯಕ್ಷತೆಯಲ್ಲಿ ಮೂಡಂಬೈಲು ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ತಮ್ಮ ವಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಡು ಸಭೆಗಳಿಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ, ಅರ್ಜಿಗಳನ್ನು ನೀಡುವಂತೆ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ ಗೌಡ, ಅಭಿವೃದ್ಧಿ ಅಧಿಕಾರಿ ರವಿ, ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಪಾರ್ವತಿ ಕೆ ಹಾಗೂ ಸರ್ವ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರ ಪ್ರಕಟಣೆ ತಿಳಿಸಿದೆ. ಪಂಚಾಯತ್‌ಗೆ ಪಾವತಿಸಬೇಕಾದ ಭೂಮಿ ತೆರಿಗೆ, ಕಟ್ಟಡ ತೆರಿಗೆ, ನೀರಿನ ಶುಲ್ಕ, ಘನತ್ಯಾಜ್ಯ ವಿಲೇವಾರಿ ಶುಲ್ಕಗಳನ್ನು ಕ್ಲಪ್ತ ಸಮಯದಲ್ಲಿ ಪಂಚಾಯತ್‌ಗೆ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಪಂಚಾಯತ್ ಪ್ರಕಟಣೆ ತಿಳಿಸಿದೆ.