ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂತ ಫಿಲೋಮಿನ ಕಾಲೇಜಿನ ಎಂ.ಎಸ್. ಡಬ್ಲ್ಯೂವಿಭಾಗದ(ಸ್ನಾತಕೋತ್ತರ ಸಮಾಜ ಕಾರ್ಯ) ವಿದ್ಯಾರ್ಥಿಗಳು ನಾಲ್ಕು ದಿನದ ಶೈಕ್ಷಣಿಕ ಶಿಬಿರವನ್ನು ಜು. 26 ರಿಂದ 29ರವರೆಗೆ ಹುಣಸೂರಿನ ಆದಿವಾಸಿ ಹಾಡಿಗಳಲ್ಲಿ ಏರ್ಪಡಿಸಿಕೊಂಡಿದ್ದರು.
ಡೀಡ್ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಬೆಳಗ್ಗೆ ನೆರವೇರಿತು. ವಿದ್ಯಾರ್ಥಿ ನಾಯಕಿ ಪವಿತ್ರ ಇವರು ಶೈಕ್ಷಣಿಕ ಶಿಬಿರದ ವರದಿ ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಿಬಿರದ ಅನುಭವವವನ್ನು ಹಂಚಿಕೊಂಡು ವಿಮರ್ಶೆ ಮಾಡಿದರು. ಡೀಡ್ ನಿರ್ದೇಶಕ ಡಾ. ಎಸ್. ಶ್ರೀಕಾಂತ್ ವಿದ್ಯಾರ್ಥಿಗಳು ಮಾಡಿದ ಸಮೀಕ್ಷೆಯನ್ನು ಉದ್ದೇಶಿಸಿ, ಸಮೀಕ್ಷೆಯಲ್ಲಿ ಮೂಡಿಬಂದಂತಹ ಪ್ರಶ್ನೆಗಳು ಹಾಗೂ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು ಮತ್ತು ಅವರ ಸಮಾಜ ಕಾರ್ಯದ ಹೋರಾಟದ ಅನುಭವಗಳನ್ನು ಹಂಚಿಕೊಂಡರು.
ಡೀಡ್ ಸಂಸ್ಥೆಯ ಕಾರ್ಯಕರ್ತರಾದ ಪ್ರಕಾಶ್ ರವರು ಮುಂದೆ ವಿದ್ಯಾರ್ಥಿಗಳು ಸಮಾಜ ಕಾರ್ಯದತ್ತ ಹೆಚ್ಚು ಮುಖ ಅಪೇಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಪ್ರತಿಭಾ. ಕೆ. ಶೀತಲ್ ಕುಮಾರ್, ವಿದ್ಯಾರ್ಥಿ ನಾಯಕ ಮೊಹಮ್ಮದ್ ಆಶಿಫ್, ಪವಿತ್ರ ಎನ್. ಹಾಗೂ ಸಂತ ಫಿಲೋಮಿನ ಕಾಲೇಜಿನ ಪ್ರಥಮ ವರ್ಷದ ಎಂ. ಎಸ್. ಡಬ್ಲ್ಯೂ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೃಥ್ವಿ ಸ್ವಾಗತಿಸಿ, ಅನಿಷಾ ವಂದಿಸಿ, ಗಾಯನ ಕಾರ್ಯಕ್ರಮ ನಿರೂಪಿಸಿದರು.