ಹುಣಸೂರಿನ ಆದಿವಾಸಿ ಹಾಡಿಗಳಿಗೆ ಫಿಲೋಮಿನಾ ಕಾಲೇಜಿನ ಎಂ.ಎಸ್‌.ಡಬ್ಲ್ಯೂ ವಿದ್ಯಾರ್ಥಿಗಳ ಭೇಟಿ

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ 2022-23ನೇ ಸಾಲಿನ ಶೈಕ್ಷಣಿಕ ಶಿಬಿರದಲ್ಲಿ ಹುಣಸೂರಿನ ಆದಿವಾಸಿ ಹಾಡಿಗಳಿಗೆ ಭೇಟಿ ನೀಡಿದರು.


ಶಿಬಿರಾರ್ಥಿಗಳು 5 ಆದಿವಾಸಿ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಸಂವಹನ ನಡೆಸಿ ಅವರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಯನ್ನು ನಡೆಸಿದರು. ಈ ಭೇಟಿಯಲ್ಲಿ ತೆಂಕಲ್ ರಂಗಯ್ಯನ ಹಟ್ಟಿ ಆದಿವಾಸಿ ಹಾಡಿಯ ಭೇಟಿಯಲ್ಲಿ 40, ಬಲ್ಲೇನ ಹಳ್ಳಿ ಹಾಡಿಯಲ್ಲಿ 44, ಕೊಟ್ಟಿಗೆ ಕಾವಲು ಹಾಡಿಯಲ್ಲಿ 52, ಚಿಕ್ಕಹೆಜ್ಜೂರು ಹಾಡಿಯಲ್ಲಿ 38 , ಕೊಳವಿಗೆ ಹಾಡಿಯಲ್ಲಿ 35 ಮನೆಗಳಿಗೆ ಜೊತೆಗೆ ಆ ಹಾಡಿಯ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಹನ ನಡೆಸಿ ಶಿಬಿರಾರ್ಥಿಗಳು ಅಧ್ಯಯನ ನಡೆಸಿದರು. ಶಿಬಿರಾರ್ಥಿಗಳು ಒಟ್ಟಾಗಿ 209 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಿ ಅಧ್ಯಯನ ಮಾಡಿದರು.


ಅದೇ ಸಮಯದಲ್ಲಿ ಹುಣಸೂರು ಬುಡಕಟ್ಟು ಜನಾಂಗದ ಅಧಿಕಾರಿಯಾದ ಬಸವರಾಜ್ ಅವರು ಚಿಕ್ಕಹೆಜ್ಜೂರು ಹಾಡಿಗೆ ಭೇಟಿ ನೀಡಿ ಶಿಬಿರಾರ್ಥಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡು ಸಂವಹನ ನಡೆಸಿದರು. ಈ ಸಂದರ್ಭದಲ್ಲಿ ಅವರು ಬುಡಕಟ್ಟು ಜನಾಂಗದ ಸೌಲಭ್ಯಗಳು, ಅವರು ಎದುರಿಸುವ ಸಮಸ್ಯೆಗಳು, ಅವರು ಸರ್ಕಾರದ ಮೇಲೆ ಹೇಗೆ ಅವಲಂಬನೆಗೊಂಡಿದ್ದಾರೆ ಮತ್ತು ಉಳಿದ ಇಲಾಖಾಧಿಕಾರಿಗಳು ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ತಿಳಿಸಿದರು.

ಸತ್ಯಶೋಧನಾ ಸಮಿತಿಯ ಮುಖ್ಯಸ್ಥರಾದ ವಿನೋದ್ ಜಿ.ಬಹುಗುಣ , ಸುಪ್ರೀಂ ಕೋರ್ಟ್ ನ ವಕೀಲರಾದ ಹೃತ್ವಿಕ್ ದತ್ತಾಜಿ, ಮಹಾರಾಷ್ಟ್ರದ ನಾಸಿಕ್ ಸಾಮಾಜಿಕ ನಾಯಕರಾದ ಸಂಜಯ್, ವಕೀಲರಾದ ತಮ್ಮಯ್ಯ , ವನವಾಸಿ ಕಲ್ಯಾಣ ರಾಜ್ಯದ ಸಂಘಟನೆಯ ಅಧಿಕಾರಿ ಗಣೇಶ್ ಇವರು ಚಿಕ್ಕಹೆಜ್ಜೂರು ಹಾಡಿಗೆ ಭೇಟಿ ನೀಡಿದರು.
ಅದೇ ರೀತಿ ಶಿಬಿರಾರ್ಥಿಗಳಿಗೆ ಆ ತಂಡದವರೊಂದಿಗೆ ಸಂವಹನ ನಡೆಸುವ ಅವಕಾಶ ದೊರೆಯಿತಲ್ಲದೇ ಅದನ್ನು ಸರಿಯಾದ ರೀತಿಯಲ್ಲಿ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮೂಲಕ ಸರಿಯಾದ ರೀತಿಯಲ್ಲಿ ಶಿಬಿರಾರ್ಥಿಗಳು ಉಪಯೋಗಿಸಿಕೊಂಡರು.


ಈ ಸಂದರ್ಭದಲ್ಲಿ ಡೀಡ್ ಸಂಸ್ಥೆಯ ಕಾರ್ಯಕರ್ತರಾದ ಅರಣ್ಯಾಧಿಕಾರಿ ಬಾಬು, ಸಂತ ಫಿಲೋಮಿನಾ ಕಾಲೇಜಿನ ಶಿಬಿರಾಧಿಕಾರಿಗಳಾದ ಪ್ರತಿಭಾ ಕೆ ಮತ್ತು ಶೀತಲ್ ಕುಮಾರ್ ಜೊತೆಗಿದ್ದು ಸಹಕಾರ ನೀಡಿದರು. ಹಾಗೆಯೆ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶಾಲಾ ವಿದ್ಯಾರ್ಥಿಗಳ ಜೊತೆಗೂಡಿ ಅವರಿಗೆ ಚಟುವಟಿಕೆಗಳನ್ನು ನಡೆಸಿ ಆ ಬಳಿಕ ಶಿಬಿರಾರ್ಥಿಗಳು ಕೊಳವಿಗೆ ಆಶ್ರಮ ಶಾಲೆಯ ಮಕ್ಕಳ ಮುಂದೆ ಶಿಕ್ಷಣ, ಮದ್ಯಪಾನ, ಆರೋಗ್ಯ ಪರಿಸರ ವಿಷಯಗಳನ್ನೊಳಗೊಂಡ ಬೀದಿನಾಟಕವನ್ನು ಪ್ರದರ್ಶಿಸಿದರು. ಅಲ್ಲಿ ನೆರೆದಿದ್ದ ಜನರೊಂದಿಗೆ ಅಧ್ಯಯನಕ್ಕೆ ಸಂಬಂಧಿಸಿದ್ದಂತೆ ಸಮೀಕ್ಷೆಗಳನ್ನು ನಡೆಸಲಾಯಿತು.

ಭೇಟಿಗೆ ಪ್ರಮುಖ ಕಾರಣವೆಂದರೆ ಬುಡಕಟ್ಟು ಜನಾಂಗದ ಜನರು ಕಾಡಿನಿಂದ ಹೊರ ಬಂದ ನಂತರ ಅವರಿಗೆ ಸಿಗಬೇಕಾದ ಪ್ರಮುಖ ಪ್ರಜಾಪ್ರಭುತ್ವದ ಹಕ್ಕುಗಳು ಅವರಿಗೆ ದೊರೆಯುತ್ತಿದೆ ಇಲ್ಲವೋ, ಅವರು ಎದುರಿಸುತ್ತಿರುವ ಸವಾಲು ಮತ್ತು ಅವರ ಆರ್ಥಿಕ ಸಾಮಾಜಿಕ ಜೀವನದ ಸ್ಥಿತಿಗತಿಗಳ ಸಲುವಾಗಿ ಈಗಾಗಲೇ 4 ರಾಜ್ಯಗಳಿಗೆ ಭೇಟಿ ನೀಡಿ ಕೊನೆಯ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here