ಬೀಟಿಗೆ ಮುಹಿಯ್ಯದ್ದೀನ್ ಕುತುಬಿಯತ್ ಕಮಿಟಿ ಅಧ್ಯಕ್ಷರಾಗಿ ಅಝೀಝ್ ಮುದ್ರಾಜೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜಾಲಡ್ಕ, ಕೋಶಾಧಿಕಾರಿ ಸಿದ್ದೀಕ್ ಬೀಟಿಗೆ

0

ಪುತ್ತೂರು: ಮುಹಿಯ್ಯದ್ದೀನ್ ಕುತುಬಿಯತ್ ಕಮಿಟಿ ಬೀಟಿಗೆ ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಝೀಝ್ ಮುದ್ರಾಜೆ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜಾಲಡ್ಕ ಹಾಗೂ ಕೋಶಾಧಿಕಾರಿಯಾಗಿ ಸಿದ್ದೀಕ್ ಬೀಟಿಗೆ ಆಯ್ಕೆಯಾಗಿದ್ದಾರೆ.


ಬೀಟಿಗೆ ಜಮಾಅತ್ ಕಮಿಟಿ ಅಧ್ಯಕ್ಷ ಕಮಿಟಿ ಅಧ್ಯಕ್ಷ ಸುಲೈಮನ್ ಬೀಟಿಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 40ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.


ಉಪಾಧ್ಯಕ್ಷರಾಗಿ ಅಬೂಬಕ್ಕರ್ ಬೀಟಿಗೆ ಹಾಗೂ ಇಸ್ಮಾಯಿಲ್ ಬೀಟಿಗೆ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲಿ ಬೀಟಿಗೆ ಆಯ್ಕೆಯಾದರು. ಸದಸ್ಯರಾಗಿ ಶಾಫಿ ಬೀಟಿಗೆ, ರಿಯಾಝ್ ಬೀಟಿಗೆ, ರಝಾಕ್ ಕೆದಿಲ, ರಫೀಕ್ ವಲಂಗಜೆ, ಉಸ್ಮಾನ್ ಮುದ್ರಾಜೆ ಆಯ್ಕೆಯಾದರು. ಬೀಟಿಗೆ ಜುಮಾ ಮಸೀದಿಯ ಖತೀಬ್ ಅಶ್ರಪ್ ದಾರಿಮಿ ಪ್ರಾರ್ಥನೆಗೆ ನೇತೃತ್ವ ನೀಡಿದರು.ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಜಮಾಅತ್ ಸದಸ್ಯರು ಉಪಸ್ಥಿತರಿದ್ದರು. ಅಲಿ ಬೀಟಿಗೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here