
ಪುತ್ತೂರು: ಸವಣೂರು ಅಂಬ ಬ್ರದರ್ಸ್ ತಂಡದಿಂದ ಸವಣೂರು ಬಸದಿ ಸಮೀಪದಲ್ಲಿ ಇರುವ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ರವರ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತನಾಟಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಸವಣೂರು ಜಿನ ಬಸದಿಯ ಅರ್ಚಕ ಶ್ರೇಯಾಂಸ್ ಇಂದ್ರರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಜಯರಾಮ ರೈ ಮೂಡಂಬೈಲು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ರಾಮಕೃಷ್ಣ ಪ್ರಭು, ಉಮೇಶ್ ಕರ್ಕೆರಾ, ಅಂಬಾ ಬ್ರದರ್ಸ್ ತಂಡದ ಸದಸ್ಯರಾದ ರಾಜ್ದೀಪಕ್ ಶೆಟ್ಟಿ ಮಠ, ಬಾಲಚಂದ್ರ ರೈ ಕೆರೆಕೋಡಿ, ನಿಶ್ಚಲ್ ಎಂ. ರೈ, ಶಿಕ್ಷಿತ್, ಸುಶಾಂತ್, ವಿಶ್ವಜಿತ್ ಶೆಟ್ಟಿ, ಸಂದೇಶ್ ಬಲ್ಯಾಯ, ಕೀರ್ತಿನ್ ಕೋಡಿಬೈಲು, ಬಾಲಚಂದ್ರ ಕನ್ನಡಕುಮೇರು ಉಪಸ್ಥಿತರಿದ್ದರು.