ಪುತ್ತೂರು: ತಾಲೂಕು ಯುವ ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯು ಬಂಟರ ಭವನದ ಕಚೇರಿಯಲ್ಲಿ ಜರಗಿತು.
ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈಯವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಜು.23ರಂದು ಜರಗಿದ ತುಳುನಾಡ ಬಂಟೆರೆ ಪರ್ಬ ಕಾರ್‍ಯಕ್ರಮ ಅದ್ದೂರಿಯಾಗಿ ನಡೆದು ಜನಮಾನಸದಲ್ಲಿ ಹೆಸರನ್ನು ಪಡೆದಿದೆ. ಈ ಮೂಲಕ ಯುವ ಬಂಟರ ಸಂಘಕ್ಕೆ ಹೆಸರು ಬಂದಿದೆ. ಕಾರ್‍ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಕಾರ್‍ಯಕ್ರಮದ ಲೆಕ್ಕಪತ್ರವನ್ನು ಮಂಡನೆ ಮಾಡಿ ಸಭೆಯಲ್ಲಿ ಅನುಮೋಧನೆ ಪಡೆಯಲಾಯಿತು. ಕಾರ್‍ಯಕ್ರಮದ ಸಂಚಾಲಕ ಹರ್ಷಕುಮಾರ್ ರೈ ಮಾಡಾವು, ಯುವ ಬಂಟರ ಸಂಘದ ಸಂಯೋಜಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಕೆ.ಸಿ.ಅಶೋಕ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಪ್ರಕಾಶ್ ರೈ ಸಾರಕರೆ, ಪದಾಧಿಕಾರಿಗಳಾದ ಮನ್ಮಥ ಶೆಟ್ಟಿ ಪುತ್ತೂರು, ನವೀನ್ ರೈ ಪಂಜಳ, ಪ್ರಜನ್ ಶೆಟ್ಟಿ ಕಂಬಳತಡ್ಡ, ಶುಭ ರೈ, ಸಂದೇಶ್ ರೈ, ಉಮಾಪ್ರಸಾದ್ ರೈ ನಡುಬೈಲು, ಸಂತೋಷ್ ರೈ ಬರೆಪ್ಪಾಡಿ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡ, ಬಂಟರ ಭವನದ ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಉಪಸ್ಥಿತರಿದ್ದರು