ಪುತ್ತೂರು: ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಸಂಜೀವಿನಿ ಇಕೋ ಕ್ಲಬ್ ಮತ್ತು ಶಿವರಾಮ ಕಾರಂತ ಇಕೋ ಕ್ಲಬ್ ಗಳ ಜಂಟಿ ಸಹ ಯೋಗದೊಂದಿಗೆ ಆ.5ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿದ್ಯಾಲಯದ ಸಂಚಾಲಕ ಹರೀಶ್ ಭಂಡಾರಿ ಟಿ ಮಾತನಾಡಿ ವೈಜ್ಞಾನಿಕತೆಯ ಮೂಲ ಸತ್ವ ಆಟಿದ ತಿಂಗಳ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ಹಾಗೂ ಹಿಂದಿನ ದಿನಗಳ ಪರಂಪರೆಗಳನ್ನ ವಿವರಿಸಿದರು.
ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ದುಗ್ಗಪ್ಪ ಎನ್ ಮಾತನಾಡಿ ಪರಶುರಾಮ ಸೃಷ್ಟಿ ತದನಂತರದ ರಾಜ ವಂಶಗಳ ಮೂಲವನ್ನ ಹುಡುಕುತ್ತಾ ದಕ್ಷಿಣ ಕನ್ನಡದ ಭವ್ಯ ಪರಂಪರೆಯನ್ನು ಹಾಗೂ ಶ್ರಮ ಜೀವನದ ಬಗ್ಗೆ ವಿವರಿಸಿದರು. ಅತಿಥಿ ವಿಶ್ರಾಂತ ಮುಖ್ಯ ಗುರು ತಾರನಾಥ ಶೆಟ್ಟಿ ಎಚ್ , ವಿದ್ಯಾಲಯದ ಪ್ರಾಂಶುಪಾಲ ಶೇಖರ್ ರೈ, ಯಕ್ಷಗಾನ ನಾಟ್ಯ ಗುರು ಗಣೇಶ್ ಪಾಳೆಚಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಟಿಡೊಂಜಿ ಕೂಟದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಜೀವಿನಿ ಇಕೋ ಕ್ಲಬ್ಬಿನ ಸಂಚಾಲಕ ಅನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ವಾಣಿಜ್ಯ ವಿಭಾಗ ರಕ್ಷಿತಾ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಗುರು ಚಂದ್ರಹಾಸ್ ರೈ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.