![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಸವಣೂರು : ಪೆರುವಾಜೆ ಗ್ರಾ.ಪಂ.ಇದರ ಎರಡನೆ ಅವಧಿಗೆ ಅಧ್ಯಕ್ಷರಾಗಿ ಮುಕ್ಕೂರು ವಾರ್ಡ್ ಸದಸ್ಯ ಜಗನ್ನಾಥ ಪೂಜಾರಿ ಮುಕ್ಕೂರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುರ್ಕೇತ್ತಿ ವಾರ್ಡ್ ಸದಸ್ಯೆ ಶಹಿನಾಜ್ ಅವರು ಆಯ್ಕೆಗೊಂಡರು. ಮುಂದಿನ ಎರಡೂವರೆ ವರ್ಷಕ್ಕೆ ನೂತನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಆ.9 ರಂದು ಪೆರುವಾಜೆ ಗ್ರಾ.ಪಂ.ನಲ್ಲಿ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಜಗನ್ನಾಥ ಪೂಜಾರಿ ಮುಕ್ಕೂರು ಅವರಿಗೆ ಸದಸ್ಯ ಸಚಿನ್ ರಾಜ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಶಹಿನಾಜ್ ಅವರಿಗೆ ಸದಸ್ಯೆ ಗುಲಾಬಿ ಬೊಮ್ಮೆಮಾರು ಸೂಚಕರಾಗಿದ್ದರು.
![](https://puttur.suddinews.com/wp-content/uploads/2023/08/da8d0514-1f55-402d-9ac1-846160a9cb07-792x1024.jpg)
ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ
ಜಗನ್ನಾಥ ಪೂಜಾರಿ ಮುಕ್ಕೂರು ಅವರು ಪೆರುವಾಜೆ ಗ್ರಾ.ಪಂ.ನ ಮೊದಲ ಅವಧಿಯಲ್ಲಿಯು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದರು. ಮುಕ್ಕೂರು ವಾರ್ಡ್ ನಿಂದ ನಾಲ್ಕು ಅವಧಿಯಿಂದ ಸದಸ್ಯರಾಗಿ ಪ್ರತಿನಿಧಿಸುತ್ತಿದ್ದಾರೆ. ಜಗನ್ನಾಥ ಪೂಜಾರಿ ಮುಕ್ಕೂರು ಅವರು ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.