ಕಾಂಗ್ರೆಸ್‌ನ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಿದ್ದಾರೆ-ಮಠಂದೂರು
ಪುತ್ತೂರು: ನರಿಮೊಗರು ಗ್ರಾ.ಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರಿಣಿ ಪಂಜಳ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಇಂದಿರಾನಗರ ಅವರಿಗೆ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನರಿಮೊಗರುವಿನಲ್ಲಿ ನಡೆಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಶಾಲು ಹಾಕಿ ಮಾಲಾರ್ಪಣೆ ಮಾಡಿ ಅಭಿನಂದಿಸಲಾಯಿತು.
ಬಳಿಕ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಾಂಗ್ರೆಸ್ ಇವತ್ತು ರಾಜ್ಯದಲ್ಲಿ ಅಧಿಕಾರ ಪಡೆದಿದೆ. ಪುತ್ತೂರಿನಲ್ಲಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಷಡ್ಯಂತ್ರ ಮಾಡಿ ಪಂಚಾಯತ್ ಸದಸ್ಯರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಿದಾಗಲೂ ನರಿಮೊಗರು ಪಂಚಾಯತ್‌ನ ಬಿಜೆಪಿ ಸದಸ್ಯರು ಯಾವುದೇ, ಷಡ್ಯಂತ್ರಗಳಿಗೆ ಅಮಿಷಗಳಿಗೆ ಬಲಿಯಾಗದೇ ಒಮ್ಮತದಿಂನದ ಅಧ್ಯಕ್ಷ,ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಶಾಸಕರಾಗಲೀ, ಪಂಚಾಯತ್ ಸದಸ್ಯರಾಗಲೀ, ಪದಾಧಿಕಾರಿಗಳಾಗಲೀ ಷಡ್ಯಂತ್ರ, ಅಮಿಷಕ್ಕೆ ಯಾವುದೇ ಕಾರ್ಯಕರ್ತರನ್ನು ಬಲಿಪಶು ಮಾಡುವುದಕ್ಕೆ ಇಲ್ಲಿಂದ ಸಂದೇಶ ರವಾನೆಯಾಗಿದೆ ಎಂದು ಮಠಂದೂರು ಹೇಳಿದರು.
ಬಿಜೆಪಿ ಪುತ್ತೂರು ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಜಿಲ್ಲಾ ಎಸ್.ಟಿ ಮೋರ್ಚಾ ಪ್ರ.ಕಾರ್ಯದರ್ಶಿ ಹರೀಶ್ ಬಿಜತ್ರೆ, ವಿಭಾಗೀಯ ಸಂಘಟನಾ ಸಹಸಂಚಾಲಕ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಪಾಣಾಜೆ ಮಹಾಶಕ್ತಿ ಕೇಂದ್ರದ ಸಂಚಾಲಕ ಜಯರಾಮ ಪೂಜಾರಿ ನರಿಮೊಗರು, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರವೀಣ್ ನಾಯ್ಕ್ ಸೇರಾಜೆ, ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಂ ಭಟ್, ವೀರಮಂಗಲ, ಬೂತ್ ಸಮಿತಿ ಅಧ್ಯಕ್ಷ ರವಿ ಕೈಲಾಜೆ, ನರಿಮೊಗರು ಹಾಲು ಸೊಸೈಟಿ ನಿರ್ದೇಶಕರ ರತ್ನಾಕರ ಮೇಲಂಟ, ಗ್ರಾ.ಪಂ ಮಾಜಿ ಅಧ್ಯಕ್ಷ ಶುಭಾಶ್ಚಂದ್ರ ಶೆಣೈ ಬಜಪ್ಪಳ, ಸುಬ್ರಾಯ ಬಿ.ಎಸ್, ದಿನೇಶ್ ಕೈಪಂಗಳದೋಳ ಹಾಗೂ ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯರು ಉಪಸ್ಥಿತರಿದ್ದರು.