ಕಡಬ ಪಟ್ಟಣ ಪಂಚಾಯತ್ ಸದಸ್ಯರಾಗಿ ಸರಕಾರದಿಂದ ಮೂವರ ನಾಮನಿರ್ದೇಶನ

0

ಕಡಬ:ಇಲ್ಲಿನ ಪಟ್ಟಣ ಪಂಚಾಯತ್‌ಗೆ ಮೂವರನ್ನು ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿ ಆದೇಶಿಸಿದೆ.


ಅಶ್ರಫ್ ಶೇಡಿಗುಂಡಿ,ಶಾಲಿನಿ ಸತೀಶ್ ನಾೖಕ್‌ ಹಾಗೂ ಆಶೀಶ್ ಅರಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡಬ ಪಟ್ಟಣ ಪಂಚಾಯತ್ ಸದಸ್ಯರಾಗಿ ಸರ್ಕಾರ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.‌


ಅಶ್ರಫ್ ಶೇಡಿಗುಂಡಿಯವರು ಈ ಹಿಂದೆ ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪಿಜಕಳ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.ಶಾಲಿನಿ ಸತೀಶ್ ಅವರು ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದವರು.ಆಶೀಶ್ ಅರಸ್ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪ ಅವರ ಪುತ್ರ.ಕಡಬ ಪಟ್ಟಣ ಪಂಚಾಯತ್ 13 ಸದಸ್ಯರನ್ನು ಹೊಂದಿದ್ದು ಇದೀಗ ಮೂವರ ನಾಮನಿರ್ದೇಶನದೊಂದಿಗೆ ಸದಸ್ಯರ ಸಂಖ್ಯೆ 16ಕ್ಕೇರಿದೆ.

LEAVE A REPLY

Please enter your comment!
Please enter your name here