ನಿಡ್ಪಳ್ಳಿ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲೋಕನಾಥ ಆಚಾರ್ಯ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ನಂತರ ಮೆರವಣಿಗೆ ನಡೆಯಿತು.
ಆ ಬಳಿಕ ಪೋಷಕರ ಕೊಡುಗೆಯಿಂದ ನಿರ್ಮಿತವಾದ ನೂತನ ಕೈ ತೊಳೆಯುವ ಘಟಕವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿದ್ಯಾಶ್ರೀ ಯವರು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿದ್ಯಾಶ್ರೀ ಸರೋಲಿಕಾನ, ಸದಸ್ಯರಾದ ಉಮಾವತಿ, ಶ್ರೀವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ದೇವಪ್ಪ.ಯು. ನಿವೃತ್ತ ಮುಖ್ಯಗುರುಗಳು, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಯಶೋದಾ ಶಾಲಾ ಮುಖ್ಯಗುರುಗಳಾದ ಲಿಂಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರುಗಳು ಸ್ವಾಗತಿಸಿ ಸಹಶಿಕ್ಷಕಿ ಗೀತಾ ವಂದಿಸಿದರು ಸಹಶಿಕ್ಷಕಿ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಾಣಿಶ್ರೀ, ಸಹಶಿಕ್ಷಕರಾದ ನಾಗರತ್ನ, ಪುಷ್ಪಾವತಿ ಅತಿಥಿ ಶಿಕ್ಷಕಿ ಚೇತನಾ ಗೌರವ ಶಿಕ್ಷಕಿಯರಾದ ಪ್ರತಿಮಾ ಹಾಗೂ ರೇಷ್ಮಾ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.