ಪೆರ್ಣೆ ಶ್ರೀ ಮುಚ್ಚಿ ಲೋಟು ಭಗವತಿ ಕ್ಷೇತ್ರ ಇದರ ಕಳಿಯಾಟ ಮಹೋತ್ಸವ-2024 ಕಾರ್ಯ ಕ್ರಮವನ್ನು ಅವಿಸ್ಮರಣೀಯ ಗೊಳಿಸುವ ನಿಟ್ಟಿನಲ್ಲಿ ಕಳಿಯಾಟ ಮಹೋತ್ಸವ ಸಮಿತಿ ಪೆರ್ಣೆ ಆಶಯದಂತೆ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ (ರಿ ) ವಿಟ್ಲ ಇದರ ವತಿಯಿಂದ ದಿನಾಂಕ 20-08-2023 ನೇ ಆದಿತ್ಯವಾರ ಚೋರ್ಲ ವಾಣಿಯರ ತರವಾಡು ಚೆಲ್ಲಡ್ಕ ಇಲ್ಲಿ ಸಮುದಾಯ ಬಾಂಧವರ ಮನೆಗಳಲ್ಲಿ ಏಕಕಾಲದಲ್ಲಿ ಫಲವೃಕ್ಷ ಗಿಡ ನೆಡುವ ಆಂದೋಲನಕ್ಕೆ ತೆಂಗಿನ ಸಸಿ ನೆಟ್ಟು ಚಾಲನೆ ನೀಡಲಾಯಿತು ಹಾಗೂ ಈ ಸಂದರ್ಭದಲ್ಲಿ ಪ್ರತಿ ಸಮುದಾಯ ಬಾಂಧವರ ಮನೆಗೆ ಹಣ್ಣಿನ ಗಿಡ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಉದಯ ದಂಬೆ, ಗೌರವ ಸಲಹೆಗಾರರಾದ ರಾಮಕೃಷ್ಣ ಕರೋಪಡಿ, ಉಪಾಧ್ಯಕ್ಷರಾದ ಮಹಾಲಿಂಗ ಚೆಲ್ಲಡ್ಕ,ನವೀನ್ ಕಿಶೋರ್ ಕುದ್ದುಪ್ಪದವು, ಸುಬ್ಬ ಮಲ್ತಡ್ಕ,ಸುಬ್ಬ ಮೂಡಂಬೈಲು,ಸಂಘಟನಾ ಕಾರ್ಯದರ್ಶಿ ನವೀನ್ ಪಾದೆಕಲ್ಲು ಹಾಗೂ ಎಲ್ಲಾ ಪದಾಧಿಕಾರಿಗಳು,ವಲಯ ಸಂಯೋಜಕರು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಗಿಡಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿ ಕೊಟ್ಟ ದಿನೇಶ್ ಅಡ್ಯನಡ್ಕ ಇವರಿಗೆ ಧನ್ಯವಾದ ಸಮರ್ಪಿಸಲಾಯಿತು. ಶಿಕ್ಷಕ ನಾಗೇಶ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ವಲಯಕ್ಕೆ ಸಂಬಂಧಿಸಿದಂತೆ ಸುಮಾರು 250 ಮನೆಗಳಲ್ಲಿ ಫಲವೃಕ್ಷ ಗಿಡಗಳನ್ನು ನಾಟಿ ಮಾಡುವ ಮೂಲಕ ಪರಿಸರ ಪ್ರೀತಿ ಮೆರೆದರು.