ಬಡಗನ್ನೂರು: ಗ್ರಾಮ ಪಂಚಾಯತ್ 2022-2023ನೇ ಸಾಲಿನ ಪಂಚಾಯತ್ ಜಮಾಬಂಧಿ ಸಭೆಯನ್ನು ಸರಕಾರದ ಆದೇಶದಂತೆ ಆ.22 ಪಂಚಾಯತ್ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷ್ಷಲತಾ ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಗ್ರಾಮ ಪಂಚಾಯತ್ ಲೆಕ್ಕ ಪತ್ರಗಳ ದಾಖಲೆ ಮತ್ತು 2022-2023ನೇ ವರ್ಷ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ಮಾಡಲಾಯಿತು.
ಜಮಾಬಂಧಿ ಅಧಿಕಾರಿ ಸುತ್ತೂರು ಸಮಾಜ ಕಲ್ಯಾಣ ಇಲಾಖೆ ಗ್ರೇಡ್-2 ಸಹಾಯಕ ನಿರ್ದೇಶಕ ಕೃಷ್ಣ ಬಿ ಮಾತನಾಡಿ, ಜಮಾಬಂದಿ ಪಾರದರ್ಶಕ ಅಡಳಿತ ವಿಸ್ತೃತ ರೂಪ, ಪಂ ಸದಸ್ಯರ ಮತ್ತು ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ನರೇಗ ಯೋಜನೆಯಲ್ಲಿ ಅದ್ಭುತ ಸಾಧನೆ ಮಾಡಿದೆ , ಪಂಚಾಯತ್ ಲೆಕ್ಕ ಪತ್ರ ಕಡತ ಉತ್ತಮ ನಿರ್ವಹಣೆಯಾಗಿದೆ. ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಅಗಲಿ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ಶ್ರೀಮತಿ ಕನ್ನಡ್ಕ, ಸಂತೋಷ್ ಆಳ್ವ, ರವಿರಾಜ ರೈ ಸಜಂಕಾಡಿ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ವಸಂತ ಗೌಡ ಕನ್ನಯ, ಹೇಮಾವತಿ ಮೋಡಿಕೆ, ಸವಿತಾ ನೆರೋಳ್ತಡ್ಕ, ದಮಯಂತಿ ಕೆಮನಡ್ಕ, ಸುಜಾತ ಮೈಂದನಡ್ಕ, ಮಾಜಿ ಸದಸ್ಯ ಉದಯ ಕುಮಾರ್ ಶರವು ಪುತ್ತೂರು ಸಮಾಜ ಕಲ್ಯಾಣ ಇಲಾಖಾ ಪ್ರ.ದ.ಸಹಾಯಕಿ ಎ.ಯಸ್ ಲಕ್ಷ್ಮೀ ದೇವಿ, ಹಾಗೂ ಉದ್ಯೋಗ ಖಾತರಿ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಜಮಾಬಂಧಿ ವರದಿ ಮಂಡಿಸಿ ,ಸ್ವಾಗತಿಸಿ ,ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.