ಕಡಬ: ಟೀಚರ್ಸ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

0

ಅಧ್ಯಕ್ಷರಾಗಿ ರಾಮಕೃಷ್ಣ ಮಲ್ಲಾರ ಉಪಾಧ್ಯಕ್ಷರಾಗಿ ಮಾಯಿಲಪ್ಪ ಜಿ. ಅವಿರೋಧ ಆಯ್ಕೆ

ಕಡಬ: ಇಲ್ಲಿನ ವೈಭವ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಕಡಬ ಟೀಚರ್ಸ್ ಕೋ ಆಪರೇಟಿವ್ ಸೊಸೈಟಿಯ ಮುಂದಿನ ಅವಧಿಗೆ ಅಧ್ಯಕ್ಷರಾಗಿ ರಾಮಕೃಷ್ಣ ಮಲ್ಲಾರ, ಉಪಾಧ್ಯಕ್ಷರಾಗಿ ಮಾಯಿಲಪ್ಪ ಜಿ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ವಿಜಯ ಕುಮಾರ್ ಎನ್.,ಎಂ.ಬಾಲಕೃಷ್ಣ, ಕುಶಾಲಪ್ಪ ಟಿ., ಜಯಂತಿ ಬಿ.ಎಂ., ಶಾರಾದ ಪಿ., ಶ್ರೀಲತಾ ಎ.ಎಸ್.,ಪುರಂದರ ಗೌಡ ಡಿ., ಸಿ.ಶಿವರಾಮ ಗೌಡ, ಜನಾರ್ದನ ಎ., ಅಂಬಿಕಾ ಎನ್., ಲಲಿತಾ ಕೆ., ಪುನಿತ್ ಕೆ. ವಿಜಯ ಕುಮಾರ್ ಇವರುಗಳು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯು ಸಂಘದ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.

2013ನೇ ಜುಲೈ ತಿಂಗಳ 13ರಂದು ಉದ್ಘಾಟನೆಗೊಂಡ ಶಿಕ್ಷಕರರ ಸೊಸೈಟಿಯು ಇದೀಗ ಯಶಸ್ವಿಯಾಗಿ ಮೂರನೇ ಅವಧಿಗೆ ಪಾದಾರ್ಪಣೆ ಮಾಡುತ್ತಿದೆ, ಮೊದಲ ಅವಧಿಯಲ್ಲಿ ರೂ.5.08 ಲಕ್ಷ ಆರ್ಥಿಕ ಲಾಭ ಗಳಿಸಿದ ಸಂಸ್ಥೆಯು, ಬೆಳೆಯುತ್ತಾ ಎರಡನೇ ಅವಧಿಯಲ್ಲಿ ರೂ.12.50 ಲಕ್ಷ ಲಾಭ ಗಳಿಸಿರುವುದರೊಂದಿಗೆ ಕಡಬ ತಾಲೂಕಿನ ಶಿಕ್ಷಕರ ಆಶಾ ಕಿರಣವಾಗಿದೆ. ಈಗಾಗಲೇ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಶಾಖೆಯನ್ನು ಹೊಂದಿದ್ದು ಮುಂದಿನ ಅವಧಿಯಲ್ಲಿ ಶಾಖೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಕಳೆದ ಎರಡೂ ಅವಧಿಯಲ್ಲಿಯೂ ರಾಮಕೃಷ್ಣ ಮಲ್ಲಾರ ಅವರೇ ಅಧ್ಯಕ್ಷರಾಗಿದ್ದರು.

LEAVE A REPLY

Please enter your comment!
Please enter your name here