ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಚಂದ್ರಯಾನ ಯಶಸ್ವಿಗಾಗಿ ಪ್ರಾರ್ಥನೆ

0

ಬೆಳ್ಳಾರೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಭಾರತೀಯರ ಮಹಾ ನಿರೀಕ್ಷೆಯ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ರಾಮಚಂದ್ರ ಶಬರಾಯ ಅವರು ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸುನೀಲ್ ರೈ ಪೆರುವಾಜೆಗುತ್ತು, ಪೆರುವಾಜೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಜಯಪ್ರಕಾಶ ಅಲೆಕ್ಕಾಡಿ, ಬಾಲಕೃಷ್ಣ ಆಚಾರ್ಯ, ಸುಶಾಂತ್ ಆಚಾರ್ಯ. ಅಜಿತ್ ಆಚಾರ್ಯ. ಗೌರಿಶಂಕರ, ಕಾರ್ತಿಕ್,ಸಂತೋಷ ಆಚಾರ್ಯ.,ಶಿವಕುಮಾರ್ ಮಣಿಕ್ಕಾರ, ಸಿಬ್ಬಂದಿ ವಸಂತ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here