ಕಾವು ಬುಶ್ರಾ ವಿದ್ಯಾಸಂಸ್ಥೆಯ ವತಿಯಿಂದ ಐತಿಹಾಸಿಕ ಬಂಗ್ಲೆಗುಡ್ಡೆ ಬೆಳ್ಳಾರೆ, ಪ್ರಗತಿ ಪರ ಕೃಷಿಕ ಹಾಗೂ ಕಲೆಗಾರರ ಮನೆ ಭೇಟಿ-ಮಾಹಿತಿ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಬುಶ್ರಾ ಆಂಗ್ಲಮಾಧ್ಯಮ ಶಾಲೆ ಕಾವು ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು ,ಇದರ ಅಂಗವಾಗಿ ಬೆಳ್ಳಾರೆಯಲ್ಲಿ ಆ. 23 ರಂದು ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಸ್ಥಳ ಬೆಳ್ಳಾರೆಯ ಬಂಗ್ಲೆಗುಡ್ಡೆ , ಪ್ರಗತಿಪರ ಕೃಷಿಕ ಶುಭಕರ ರೈ ಯವರ ಮನೆ ಭೇಟಿ ಮಾಹಿತಿ ಕಾರ್ಯಾಗಾರ ಹಾಗೂ ಕಲಾಗಾರ ಐತ ಪಾಟಾಜೆ ಯವರ ಮನೆಗೆ ಭೇಟಿ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಐತಿಹಾಸಿಕ ಬಂಗ್ಲೆಗುಡ್ಡೆ ಬೆಳ್ಳಾರೆ
ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಮತ್ತು ಸ್ನೇಹಿತರ ಕಲಾ ಸಂಘ(ರಿ.) ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ 1837ರಲ್ಲಿ ನಡೆದ ಅಮರ ಸುಳ್ಯದ ರೈತಾಪಿ ಜನರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಅಮರ ಕ್ರಾಂತಿ ಯ ನೆನಪು ಕಾರ್ಯಕ್ರಮವು ಆಗಸ್ಟ್ 23 ರಂದು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆ ಬೆಳ್ಳಾರೆಯಲ್ಲಿ ನಡೆಯಿತು.ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು.ಐತಿಹಾಸಿಕ ಸ್ಥಳ ಮತ್ತು ಮುಂದಿನ ಯೋಜನೆ ಬಗ್ಗೆ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಮಾಹಿತಿ ನೀಡಿದರು. ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ಸಲಹೆಗಾರ ಕೃಷ್ಣಪ್ರಸಾದ್, ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು ಉಪಸ್ಥಿತರಿದ್ದರು. ಬುಶ್ರಾ ವಿದ್ಯಾಸಂಸ್ಥೆಯ ಸಿಬ್ಬಂದಿ ರಶೀದ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ನೆಟ್ಟಾರು , ಹಾಗೂ ಬುಶ್ರಾ ಸಂಸ್ಥೆಯ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು. ಬುಶ್ರಾ ವಿದ್ಯಾಸಂಸ್ಥೆಯ 40 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಗತಿಪರ ಕೃಷಿಕನ ಮನೆ ಭೇಟಿ :
ಬೆಳ್ಳಾರೆ ಶಾಲಾ ಬಳಿಯ ಪ್ರಗತಿ ಪರ ಕೃಷಿಕ ಶುಭಕರ ರೈ ಬೀಡುರವರ ಮನೆಗೆ ಭೇಟಿ ನೀಡಿ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.ಕೃಷಿಕ ಶುಭಕರ ರೈ ಮಾಹಿತಿಯನ್ನು ನೀಡಿ ಕೃಷಿ ಪರಿಸರಕ್ಕೆ ಕೊಂಡು ಹೋದರು. ಬಳಿಕ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಅವರನ್ನು ಗೌರವಿಸಲಾಯಿತು.

ಕಲಾಗಾರ ಐತ ಪಾಟಾಜೆ ಮನೆ ಭೇಟಿ ಸನ್ಮಾನ ಕಾರ್ಯಕ್ರಮ
ಮಣ್ಣಿನಲ್ಲಿ ಮೂರ್ತಿ ಮಾಡಿ ದ.ಕ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದ ಬೆಳ್ಳಾರೆ ಗ್ರಾಮದ ಐತ ಪಾಟಾಜೆಯವರ ಮನೆಗೆ ಭೇಟಿ ನೀಡಲಾಯಿತು ಹಾಗೂ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಐತ ಪಾಟಾಜೆಯವರು ಮಕ್ಕಳಿಗೆ ಮಣ್ಣಿನಲ್ಲಿ ವಿವಿದ ಕಲಾಕೃತಿ ಮಾಡುವುದರ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಸಂ‌ಸ್ಥೆಯ ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ನೆಟ್ಟಾರು ,ಸಂಸ್ಥೆಯ ಸಿಬ್ಬಂದಿ ರಶೀದ್ ಬೆಳ್ಳಾರೆ , ಬೋಧಕೇತರ ವೃಂದದವರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here