ಪುತ್ತೂರು: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನೂತನ ಭಜನಾ ತಂಡಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಭಜನೆಯಿಂದ ವಿಭಜನೆ ಅಸಾಧ್ಯ, ಭಜನೆ ಮಾಡುವುದರಿಂದ ಮನಸ್ಸು, ಹೃದಯ ಶುದ್ಧವಾಗಿ ನಮ್ಮ ಸುತ್ತ ಧನಾತ್ಮಕ ವಾತಾವರಣ ಸೃಷ್ಟಿಸಲು ಸಾಧ್ಯ ಎಂದು ಹೇಳಿದರು.
ನೆಲ್ಲಿಕಟ್ಟೆ ಅಂಬಿಕಾ ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಮಾತನಾಡಿ ಭಜನೆ ಮಾಡುವುದರಲ್ಲಿ ಭಕ್ತಿ ಶ್ರದ್ದೆ ಇದ್ದಾಗ ದೇವರು ಖಂಡಿತವಾಗಿಯೂ ಒಲಿಯುತ್ತಾರೆ. ಭಜನೆಯಲ್ಲಿ ರಾಗಕ್ಕಿಂತಲೂ ಭಕ್ತಿ ಭಾವ ಮುಖ್ಯ ಎಂದರು. ನಂತರ ಶಾಲೆಯ ಭಜನಾ ತಂಡದ ವಿದ್ಯಾರ್ಥಿಗಳಿಗೆ ಶಾಲು ನೀಡಿ ಅಭಿನಂದಿಸಿ, ವಿದ್ಯಾರ್ಥಿ ತಂಡಕ್ಕೆ ಭಜನೆಗಳನ್ನು ಕಲಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯೆ ದೀಪಿಕಾ ಪ್ರಕಾಶ್ ರೈ ಬೈಲಾಡಿ ವರಮಹಾಲಕ್ಷ್ಮಿ ಕಾರ್ಯಕ್ರಮದ ಪ್ರಯುಕ್ತ ಶಾಲಾ ಶಿಕ್ಷಕಿಯರಿಗೆ ಅರಶಿಣ ಕುಂಕುಮ, ರವಿಕೆ ಕಣ ನೀಡಿ ಸುಮಂಗಲಿಯರನ್ನು ಹರಸಿದರು.
ಶಾಲೆಯ ಮುಖ್ಯ ಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗೌತಮಿ ಮಾತಾಜಿ ವಂದಿಸಿದರು. ಮೋಹಿನಿ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಭಜನಾ ತಂಡದ ಸಂಯೋಜಕಿ ಪವಿತ್ರಾ, ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.