ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪುಚ್ಛೇರಿ ಭಾಗದಲ್ಲಿ ಆ.25 ರಾತ್ರಿ ಕಾಡನೆ ದಾಳಿ ನಡೆದಿದೆ. ಶಿವಾರು ಮಲೆಯಿಂದ ಬಂದ ಆನೆಗಳು ರಾತ್ರಿ ಹೊತ್ತು ಪುಚ್ಛೇರಿ ಗಂಗಾಧರ ಗೌಡ ಮತ್ತು ಮೋಹನ ಗೌಡರವರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬಾಳೆಗಿಡಗಳನ್ನು ನಾಶ ಮಾಡಿವೆ.
ತೋಟಕ್ಕೆ ಹಾಕಿರುವ ಸ್ಪ್ರಿಂಕ್ಲೆರ್ ಪೈಪುಗಳನ್ನು ನಾಶ ಮಾಡಿವೆ. ಅಲ್ಲಿಂದ ಹೋದ ಆನೆಗಳು ನಂತರ ಪುಚ್ಛೇರಿ ಬಾಲಕೃಷ್ಣ ಗೌಡ, ಗುಮ್ಮಣ್ಣ ಗೌಡ ಇವರ ತೋಟಕ್ಕೆ ನುಗ್ಗಿ ಬಾಳೆ ಗಿಡ ತೆಂಗಿನ ಗಿಡಗಳನ್ನು ನಾಶ ಮಾಡಿವೆ. ನಂತರ ಕುಡ್ತಾಜೆ ಚೆನ್ನಕೇಶವ ಗೌಡರ ತೆಂಗಿನ ಗಿಡಗಳನ್ನು ತಿಂದಿವೆ. ನಂತರ ಕುಡ್ತಾಜೆ ಕಾಡಿಗೆ ಹೋಗಿವೆ. ಈ ಭಾಗದಲ್ಲಿ ಕೆಲವೇ ದಿನಗಳಲ್ಲಿ ಮೂರನೇ ಬಾರಿ ನಡೆದಿರುವ ಕಾಡನೆ ದಾಳಿ ಇದಾಗಿದೆ. ಇದರಿಂದಾಗಿ ಈ ಭಾಗದ ಜನರು ಭಯ ಭೀತಾರಾಗಿದ್ದಾರೆ. ಅರಣ್ಯ ಇಲಾಖೆಯವರು ಈ ಕಡೆ ಗಮನಹರಿಸಬೇಕಾಗಿದೆ.