ಚಾರ್ವಾಕದ ಪುಲಿತ್ತಡಿ ನಿರ್ಮಾಣ ಹಂತದಲ್ಲಿರುವ ಮನೆಗೆ 60,000ರೂಗಳ ಕಿಟಕಿ, ಬಾಗಿಲಿನ ದಾರಂದ ವ್ಯವಸ್ಥೆ, ದಿನಸಿ ಸಾಮಾಗ್ರಿ ಹಸ್ತಾಂತರ
ಕಾಣಿಯೂರು: ಬೆಂಗಳೂರು ನಂದಗೋಕುಲ ಟ್ರಸ್ಟ್ ಫಂಡ್ ವತಿಯಿಂದ ಕಳೆದ ಐದು ವರ್ಷಗಳಿಂದ ತೀರಾ ಬಡತನ ಮತ್ತು ಆರೋಗ್ಯ ಸಮಸ್ಯೆ ಇರುವ ಅಶಕ್ತ ಕುಟುಂಬಗಳಿಗೆ ಸಹಾಯಹಸ್ತವನ್ನು ಮಾಡಿಕೊಂಡು ಬರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು, ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ, ಸುಳ್ಯ, ಪುತ್ತೂರು ತಾಲೂಕಿನ ಯುವಕರು ಆರಂಭಿಸಿರುವ ನಂದಗೋಕುಲ ಟ್ರಸ್ಟ್ ಫಂಡ್ ನ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಡಬ ತಾಲ್ಲೂಕಿನ ಚಾರ್ವಾಕ ಗ್ರಾಮದ ಪುಲಿತ್ತಡಿಯಲ್ಲಿ ಎಂಬಲ್ಲಿ ಅನಾರೋಗ್ಯದಲ್ಲಿರುವ ಮೋನಪ್ಪ ಗೌಡರವರ ಕುಟುಂಬಕ್ಕೆ ನಿರ್ಮಾಣ ಹಂತದಲ್ಲಿರುವ ಮನೆಗೆ 60,000ರೂಗಳ ಕಿಟಕಿ, ಬಾಗಿಲಿನ ದಾರಂದದ ವ್ಯವಸ್ಥೆಯನ್ನು ಮಾಡಿಕೊಡಲಾಯಿತು ಹಾಗೂ ದಿನಸಿ ಸಾಮಾಗ್ರಿಗಳನ್ನು ಅ.19ರಂದು ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್ ಅರುವಗುತ್ತು, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಉದ್ಯಮಿ ಧರ್ಣಪ್ಪ ಗೌಡ ಅಂಬುಲ, ದೈವದ ಪರಿಚಾರಕರಾದ ಧರ್ಮಪಾಲ ಗೌಡ ಅಂಬುಲರವರು ಉಪಸ್ಥಿತರಿದ್ದು, ನಂದಗೋಕುಲ ಟ್ರಸ್ಟ್ ನ ಕೆಲಸ ಕಾರ್ಯವನ್ನು ಶ್ಲಾಘಿಸಿದರು. ನಂದಗೋಕುಲ ಟ್ರಸ್ಟ್ ಫಂಡ್ ನ ಸದಸ್ಯರಾದ ಮೋಹನ್ ಕೆ ಪಿ, ನಾಗೇಶ್, ರವಿರಾಜ್, ಪ್ರಮೋದ್, ಪವನ್, ಮೋಹನ್, ಪ್ರಸಾದ್, ಅರುಣ್, ಚಿದಾನಂದ, ಕಾರ್ತಿಕ್ ಕೆ, ನವೀನ್ ನಿತಿನ್, ಅಮೃತ್, ಕಾರ್ತಿಕ್ ಎಂ, ಹರಿಪ್ರಸಾದ್, ಯತಿನ್, ಶೃತಿ, ಲಿಖಿತಾ, ರಕ್ಷಾ, ರೂಪ, ಸಹನಾ, ದಿವ್ಯಾ, ಆಶಿತಾ, ರಮ್ಯಾ, ಸೌಮ್ಯ, ಪ್ರಮೀಳಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.