





ಕಡಬ: ಎಸ್ಕೆಎಸ್ಸೆಸ್ಸೆಫ್ ವಿಖಾಯ ಸುಂಕದಕಟ್ಟೆ ಶಾಖೆ ವತಿಯಿಂದ ಸುಂಕದಕಟ್ಟೆಯಿಂದ ಬೆರಿಕೆ ಮೂಜರು, ವಳಚ್ಚಿಲ್ ಭಾಗದಲ್ಲಿ ವಿದ್ಯುತ್ ಲೈನ್ಗೆ ವಾಲಿಕೊಂಡಿದ್ದ ಮರದ ಗೆಲ್ಲುಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸುವ ಕಾರ್ಯ ಆ.25ರಂದು ನಡೆಯಿತು. ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಮೆಸ್ಕಾಂ ಇಲಾಖೆ ಪರವಾಗಿ ಮೆಸ್ಕಾಂ ಬಿಳಿನೆಲೆ ಶಾಖಾಧಿಕಾರಿ ಮತ್ತು ಸಿಬ್ಬಂದಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.












