14.17 ಕೋಟಿ ರೂ ವ್ಯವಹಾರ; 13.36 ಲಕ್ಷ ರೂ.ಲಾಭ – ಅಧ್ಯಕ್ಷ ಶೀನ ನಾಯ್ಕ
ಪುತ್ತೂರು : ಇಲ್ಲಿನ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣ ಇದರ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿಯು 2022 -23ನೇ ಸಾಲಿನಲ್ಲಿ ರೂ.14.17 ಕೋಟಿ ವಹಿವಾಟು ನಡೆಸುವ ಮೂಲಕ ತೃತೀಯ ಅವಧಿಯಲ್ಲೂ ಅತ್ಯುತ್ತಮ ರೀತಿಯ ಸಾಧನೆ ಮಾಡಿದೆಯೆಂದು ಸಹಕಾರಿಯ ಅಧ್ಯಕ್ಷ ಶೀನ ನಾಯ್ಕ ಮಾಹಿತಿ ನೀಡಿದರು. ಅವರು ಇಲ್ಲಿನ ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಇದರ ಸಭಾಂಗಣದಲ್ಲಿ ಆ.27 ರಂದು ನಡೆದ ಮಹಾಸಭೆಯಲ್ಲಿ ,ಅಧ್ಯಕ್ಷತೆ ವಹಿಸಿ ಮಾತನಾಡಿ ,
ಸಹಕಾರಿಯು ಸುಮಾರು 1843 ಎ. ತರಗತಿಯ ಸದಸ್ಯರನ್ನು ಹೊಂದಿದ್ದು, ರೂ.38.43 ಲಕ್ಷ ಪಾಲು ಬಂಡವಾಳ ಹೊಂದಿದೆ.ಒಟ್ಟು ಶೇರ್ ಬಂಡವಾಳ 38.61 ಲಕ್ಷ ಹೊಂದಿದೆ.
ಪ್ರಸಕ್ತ ಸಾಲಿನಲ್ಲಿ ರೂ.13.36 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ಸಂಯುಕ್ತ ಸಹಕಾರಿಯ ನಿಯಮಾನುಸಾರ ಲಾಭಾಂಶವನ್ನು ವಿವಿಧ ನಿಧಿಗಳಿಗೆ ವಿಂಗಡಿಸಲಾಗಿದೆ. ಆಡಳಿತ ಮಂಡಳಿಯ ಹಾಗೂ ಸದಸ್ಯರ ಪ್ರಾಮಾಣಿಕ ಕಾರ್ಯವೈಖರಿಯೇ ಇದಕ್ಕೆಲ್ಲಾ ಮೂಲ. ಮುಂದೆ ಇನ್ನೂ ಉತ್ತಮ ಸಾಧನೆ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ತೆರೆದು ಸೌಹಾರ್ದದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅವರು ಹೇಳಿ ಸದಸ್ಯರ ಬೆಂಬಲ ಯಾಚಿಸಿದರು. ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಸದಸ್ಯರಿಗೆ ರೂ.2.49 ಕೋಟಿ ರೂ.ಸಾಲ ನೀಡಲಾಗಿದೆ. ಶೇಕಡಾ ನೂರರಷ್ಟು ಸಾಲ ವಸೂಲಾತಿ ಮಾಡಿದ್ದು, ರೂ.3.95 ಕೋಟಿ ಠೇವಣಿ ಸಂಗ್ರಹಣೆಯಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಚೋಮ ನಾಯ್ಕ ಸಹಿತ ಎಲ್ಲಾ ನಿರ್ದೆಶಕರು, ಸದಸ್ಯರು ಹಾಜರಿದ್ದರು.
ಕಾನೂನು ಸಲಹೆಗಾರ ಮಂಜುನಾಥ್ ಎನ್.ಎಸ್ ಹಾಗೂ ಸದಸ್ಯರಾದ ವಾಸು ,ದುಗ್ಗಪ್ಪ ನಾಯ್ಕ ,ಬಾಬು ನಾಯ್ಕ ಹಾಗೂ ಕರುಣಾಕರ್ ರವರು ತಮ್ಮ ಅನಿಸಿಕೆಯೊಂದಿಗೆ ಸೂಕ್ತ ಸಲಹೆಯನ್ನಿತ್ತರು.ಸಹಕಾರಿ ಸಿಬಂದಿ ಮಮತಾ ಹೆಚ್ ಪ್ರಾರ್ಥಿಸಿ ,ನಿರ್ದೇಶಕ ರಾಮ ನಾಯ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿತ್ ಬಿ. ನಾಯ್ಕ ವರದಿ ಮಂಡಿಸಿದರು. ನಿರ್ದೇಶಕ ಶಿವಪ್ಪ ನಾಯ್ಕ ವಂದಿಸಿ , ಸಿಬ್ಬಂದಿ ಜಯ ಹಾಗೂ ಪಿಗ್ಮೀ ಎಜೆಂಟ್ ಗಣೇಶ್ ಸಹಕರಿಸಿದರು. ಸಹಕಾರಿಯ ನಿರ್ದೇಶಕ ಪೂವಪ್ಪ ನಾಯ್ಕ ಬೈಲಾ ತಿದ್ದುಪಡಿಯನ್ನು ಮಹಾಸಭೆಯಲ್ಲಿ ಮಂಡಿಸಿ , ಸಭೆಯ ಅನುಮೋದನೆ ಪಡೆದುಕೊಳ್ಳಲಾಯಿತು.
ಸನ್ಮಾನ :
ಇತ್ತೀಚಿಗೆ ಕಡಬ ತಾಲೂಕಿನ ಏಣಿತ್ತಡ್ಕ ಬಳಿಯ ಕುಮಾರಧಾರ ನದಿಯಲ್ಲಿ ಸಂಭವಿಸಿದ ತೆಪ್ಪ ದುರಂತದ ವೇಳೆ , ಈಜಿನ ಮೂಲಕ ದಡ ಸೇರಿದ ವಿದ್ಯಾಲಕ್ಷ್ಮೀ ಹಾಗೂ ಸುನಂದ ಇಬ್ಬರೂ ಸಾಹಸಿಯರನ್ನು ಸಹಕಾರಿಯ ಪರವಾಗಿ ಸದಸ್ಯರ ಮುಂದೆ ಸನ್ಮಾನಿಸಲಾಯಿತು.