ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 3600 ಮಂದಿ ಗೃಹಲಕ್ಷ್ಮೀ ಯೋಜನೆ ನೋಂದಾವಣೆ – ಪುತ್ತೂರು ಪುರಭವನದಲ್ಲಿ ಸಹಾಯಕ ಕಮೀಷನರ್ ಅವರಿಂದ ಚಾಲನೆ

0

ಪುತ್ತೂರು: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಬಹುನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಗೆ ಆ.30ರ ರಾಜ್ಯ ಮಟ್ಟದ ಚಾಲನೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿದ್ದಂತೆ ಪುತ್ತೂರು ಪುರಭವನದಲ್ಲಿ ಅದರ ನೇರಪ್ರಸಾರ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ’ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಲಾಯಿತು. ಏಕಕಾಲದಲ್ಲಿ ರಾಜ್ಯಾದ್ಯಂತ ಯೋಜನೆಗೆ ಚಾಲನೆ ದೊರೆಯು ಸಂದರ್ಭದಲ್ಲಿ ಪುತ್ತೂರು ಪುರಭವನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿತ ಮೊಬೈಲ್‌ನೊಂದಿಗೆ ಆಗಮಿಸಿದ ಫಲಾನುಭವಿಗಳು ತಮ್ಮ ತಮ್ಮ ಖಾತೆಗೆ ನಗದು ಜಮೆ ಆಗಿರುವುದನ್ನು ಅಧಿಕಾರಿಗಳ ಮುಂದೆ ಖಚಿತಪಡಿಸಿಕೊಂಡರು.
ಮಹಿಳೆಗೆ ಮನೆಯನ್ನು ನಿಭಾಯಿಸುವ ಶಕ್ತಿ ಇದೆ:
ಸಹಾಯಕ ಕಮೀಷನರ್ ಅವರು ಮಾತನಾಡಿ ಸರಕಾರದ ಮಹತ್ವಾಂಕ್ಷದ ಯೋಜನೆ ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಡಿದೆ. ಮಹಿಳೆಗೆ ಮನೆಯನ್ನು ನಿಬಾಯಿಸುವ ಶಕ್ತಿ ಇದೆ. ಸಕಾರದ ಮೂಲ ಉದ್ದೇಶ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು ಎಂದರು. ತಹಸೀಲ್ದಾರ್ ಶಿವಶಂಕರ್ ವೇದಿಕೆಯಲಿ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ 3,600 ಮಂದಿ ನೋಂದಾವಣೆ
ಸರಕಾರವು ಮಹಿಳೆಯರಿಗೆ ಅವರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯೂ ಒಂದಾಗಿದ್ದು, ಇದರಲ್ಲಿ ಕುಟುಂಬದ ಯಜಮಾನಿಯ ಪಾತ್ರ ಮಹತ್ವದ್ದು. ಯಜಮಾನಿ ಆರ್ಥಿಕವಾಗಿ ಸದೃಢಗೊಂಡಾಗ ಮಾತ್ರ ಕುಟುಂಬದಲ್ಲಿ ಹೆಚ್ಚಿನ ಶ್ರೇಯಸ್ ಕಾಣಲು ಸಾಧ್ಯವೆಂದು ಸರಕಾರ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 3,600 ಮಂದಿ ಗೃಹಲಕ್ಷ್ಮೀ ಯೋಜನೆಗೆ ನೋಂದಾವಣೆ ಮಾಡಿದ್ದು, ತಾಲೂಕಿನಲ್ಲಿ ಒಟ್ಟು 22,953 ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಭಾರತಿ ಅವರು ಮಾಹಿತಿ ನೀಡಿದರು.

ನಗರಸಭೆ 5 ಕಡೆಗಳಲ್ಲಿ ನೇರಪ್ರಸಾರ
ಗೃಹಲಕ್ಷ್ಮಿ ಯೊಜನೆಯ ಅನುಷ್ಠಾನ ಕಾರ್ಯಕ್ರಮದ ನೇರ ಪ್ರಸಾರವನ್ನು ನಗರಸಭೆಯ ಪುತ್ತೂರು ಪುರಭವನ ಸೇರಿದಂತೆ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ, ಸೈಂಟ್ ಫಿಲೋಮಿನಾ ಸ್ಕೂಲ್ ಹಾಲ್, ಬಂಟರ ಭವನ ಪುತ್ತೂರು, ಎಂಡಿಎಸ್ ಟ್ರಿನಿಟಿ ಹಾಲ್ ಪಡಿಲ್‌ನಲ್ಲಿ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗಿದೆ.
ಮಧು ಎಸ್ ಮನೋಹರ್
ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here