ಪುತ್ತೂರು: ಕಳೆದ 15 ವರ್ಷಗಳಿಂದ ಇಲ್ಲಿನ ಮುಖ್ಯ ರಸ್ತೆಯ ಧರ್ಮಸ್ಥಳ ಬಿಲ್ಡಿಂಗ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀಮಾ ಬ್ಯೂಟಿಪಾರ್ಲರ್ ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಹಾಗೂ ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ನವೀಕೃತಗೊಂಡು ಆ.30ರಂದು ಶುಭಾರಂಭಗೊಂಡಿತು.
ಕೆದಂಬಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ತಿಂಗಳಾಡಿ ಸಂಸ್ಥೆಯನ್ನು ಉದ್ಘಾಟಿಸಿ, ಶುಭಹಾರೈಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ತಾನು ಸ್ವ-ಉದ್ಯೋಗ ಮಾಡಿಕೊಂಡು ನೂರಾರು ಮಂದಿಗೆ ತರಬೇತಿ ನೀಡಿ ಸ್ವ ಉದ್ಯೋಗಗಕ್ಕೆ ಪ್ರೋತ್ಸಾಹ ಸಂಸ್ಥೆಯ ಸಾಧನೆ ಶ್ಲಾಘನೀಯ. ತಾನು ಶೃಂಗಾರವಾಗಿರಬೇಕು ಎನ್ನುವ ಹಂಬಲ ಎಲ್ಲಾ ಮಹಿಳೆಯರಲ್ಲಿದೆ. ಅದಕ್ಕೆ ಪೂರಕವಾಗಿ ಉತ್ತಮ ತರಬೇತಿ ನೀಡಿ ಇತರರಿಗೂ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯಲಿ ಎಂದರು.
ಕಾರುಣ್ಯ ಬ್ಯೂಟಿಪಾರ್ಲರ್‌ನ ಮ್ಹಾಲಕಿ ನಿಶ್ಚಲ ಆಳ್ವ ಮಾತನಾಡಿ, ಸಂಸ್ಥೆಯ ಮ್ಹಾಲಕರು ಉತ್ತಮ ಕನಸನ್ನು ಕಂಡಿದ್ದಾರೆ ಮತ್ತು ಅದನ್ನು ಈಡೇರಿಸಿದ್ದಾರೆ. ಜೊತೆಗೆ ಇನ್ನಷ್ಟು ಮಂದಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನ ಜನತೆಗೆ ಸಂಸ್ಥೆಯ ಮೂಲಕ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಹಾರೈಸಿದರು.
ಮ್ಹಾಲಕಿ ಮಾಧವಿ ಮನೋಹರ್ ರೈ ಮಾತನಾಡಿ, ಕಳೆದ 15 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆಯಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸೇವೆ ನೀಡಬೇಕು ಎನ್ನುವ ಕನಸು ಕಂಡಿದ್ದು ಅದು ಈಗ ಈಡೇರಿದೆ ಎಂದರು.
ಸೆನೋರಿಟಾ ಬ್ಯೂಟಿಪಾರ್ಲರ್‌ನ ದಿವ್ಯಾ ಕೆ ಶೆಟ್ಟಿ, ಸೌಂಧರ್ಯ ಬ್ಯೂಟಿಪಾರ್ಲರ್ ಹೇಮಜಯರಾಮ್, ದಿವ್ಯ, ಶಿಲ್ಪಾ ಹರಿಪ್ರಸಾದ್ ರೈ, ಬ್ಯೂಟಿಪಾರ್ಲರ್‌ಗಳ ಸಾಮಾಗ್ರಿಗಳ ವಿತರಕ ಸಂಸ್ಥೆ ಬ್ಯೂಟಿ ಪ್ಲಾನೆಟ್‌ನ ಜಗದೀಶ್, ಶೀನಪ್ಪ ರೈ, ಶೀಲಾವತಿ ರೈ, ಮನೋಹರ ರೈ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆ ಶುಭಹಾರೈಸಿದರು.
ನಮ್ಮಲ್ಲಿ ಫೇಶಿಯಲ್, ಬ್ಲೀಚ್, ಕ್ಲೀನ್ ಅಪ್, ಕಲರಿಂಗ್, ಮೆನಿಕ್ಯೂರ್, ಪೆಡಿಕ್ಯೂರ್, ಹೇರ್-ಕಟ್ಟಿಂಗ್-ಸ್ಟ್ರೆಟನಿಂಗ್-ಕಲರಿಂಗ್, ವಧುವಿನ ಶೃಂಗಾರ, ಮದರಂಗಿ ಸೇರಿದಂತೆ ಎಲ್ಲಾ ರೀತಿಯ ಬ್ಯೂಟಿಷಿಯನ್ ಸೇವೆಗಳು ಲಭ್ಯವಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ತರದ ಶೃಂಗಾರ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮ್ಹಾಲಕಿ ಮಾಧವಿ ಮನೋಹರ್ ರೈಯವರು ತಿಳಿಸಿದ್ದಾರೆ.