ಪುತ್ತೂರು : ದಕ್ಷಿಣ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಆ.29 ರಂದು ನಡೆದ ಜಿಲ್ಲಾ ಮಟ್ಟದ ಬಾಲಕ ಹಾಗೂ ಬಾಲಕಿಯರ ಚೆಸ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮನ್ವಿತ್ ಕಣಜಾಲು ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನಾಗಶ್ರೀ ನಾಲ್ಕನೇ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮನ್ವಿತ್ ಕಣಜಾಲು ಮೊಟ್ಟೆತ್ತಡ್ಕ ನಿವಾಸಿ ದಾಮೋದರ್ ಕಣಜಾಲು ಹಾಗೂ ರಶ್ಮಿ ಪಿ.ಎಸ್ ದಂಪತಿಗಳ ಪುತ್ರನಾಗಿದ್ದು, ಇವರಿಗೆ ಸತ್ಯಪ್ರಸಾದ್ ಕೋಟೆ, ಅರವಿಂದ ಶಾಸ್ತ್ರಿ ಹಾಗೂ ಜಿ ಎಮ್ ಸ್ಟ್ಯಾನಿ ಜಿ.ಎ ತರಬೇತಿಯನ್ನು ನೀಡಿರುತ್ತಾರೆ.
ನಾಗಶ್ರೀ ಇವರು ಕುಂಬ್ರ ನಿವಾಸಿ ಜಗದೀಶ್ ನಾಯ್ಕ್ ಹಾಗೂ ಉಮಾ ನಾಯ್ಕ್ ದಂಪತಿಗಳ ಪುತ್ರಿಯಗಿದ್ದು, ಇವರಿಗೆ ಸತ್ಯಪ್ರಸಾದ್ ಕೋಟೆ ಹಾಗೂ ಪ್ರಶಾಂತ್ ಜೆ ನಾಯ್ಕ್ ತರಬೇತಿಯನ್ನು ನೀಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.