





ವಿಟ್ಲ:ಕೇಂದ್ರ ಸರಕಾರದ ನೂತನ ಸಹಕಾರಿ ನಿಯಮದಂತೆ ಗ್ರಾಮಕ್ಕೊಂದು ಸೊಸೈಟಿ ಮಾಡಬೇಕೆಂದು ರಾಜ್ಯ ಸರಕಾರ ಸಹಕಾರಿ ನಿಭಂದಕರ ಮೂಲಕ ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಮಾಡಲಾದ ಆದೇಶವನ್ನು ಆಡಳಿತ ಮಂಡಳಿ ಸಭೆ ಸೇರಿ ನಿರ್ಣಯಿಸಿದಂತೆ ಹೈ ಕೋರ್ಟ್ ನಲ್ಲಿ ಪ್ರಶ್ನಿಸಿ ದಾವೆ ಹೂಡಿರುವುದನ್ನು ವಿಚಾರಣೆ ಸ್ವೀಕರಿಸಿದ ನ್ಯಾಯಾಲಯ , ವಿಟ್ಲ ಪಡ್ನೂರ್, ಕೊಳ್ನಾಡು ಸಾಲೆತ್ತೂರು ಗ್ರಾಮಗಳಲ್ಲಿ ಪ್ರತ್ಯೇಕ ಸೊಸೈಟಿಗಳಾದಲ್ಲಿ ಆಗುವ ತೊಂದರೆಗಳ ಬಗ್ಗೆ ವಾದವನ್ನು ಆಲಿಸಿದ ಕೋರ್ಟ್ ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ನೀಡಿದೆ ಎಂದು ಸಂಘ ದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ತಿಳಿಸಿದ್ದಾರೆ. ಸಂಘದ ಪರವಾಗಿ ನ್ಯಾಯವಾದಿ ಕೇಶವ ಭಟ್ ಆಗರ್ತ ಮತ್ತು ಕೃಷ್ಣ ಕೆ. ವಾದಿಸಿದ್ದರು.











