ಪುತ್ತೂರು: ಪಶು ಸಂಗೋಪನೆ ಕೃಷಿಯ ಒಂದು ಭಾಗವಾಗಿದೆ. ಇದಕ್ಕೆ ಪೂರಕವಾಗಿ ಸರಕಾರ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮ ಮಟ್ಟದಲ್ಲಿ ಪಶು ಸಖಿಯರು ಪಶುವೈದ್ಯಾಧಿಕಾರಿಯ ಕೆಲಸವನ್ನು ಮಾಡುತ್ತಿದ್ದಾರೆ ಇಲಾಖೆಯ ಯೋಜನೆಗಳನ್ನು ಬಡವರು, ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪುತ್ತೂರು ಶಾಸಕರ ಕಛೇರಿ ಸಭಾಭವನದಲ್ಲಿ ನಡೆದ ಫಲಾನುಭವಿಗಳಿಗೆ ರಬ್ಬರ್ ನೆಲಹಾಸು ಮತ್ತು ಪಶು ಸಖಿಯರಿಗೆ ಪ್ರಥಮ ಚಿಕಿತ್ಸಾ ಕಿಟ್ಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ನೆಲಹಾಸು ಮತ್ತು ಕಿಟ್ ವಿತರಿಸಿ ಮಾತನಾಡಿದರು.
ಪುತ್ತೂರು ಪಶು ಆಸ್ಪತ್ರೆಯ(ಆಡಳಿತ) ಮುಖ್ಯ ಪಶುವೈದ್ಯಾಧಿಕಾರಿ ಡಾ.ಧರ್ಮಪಾಲ್ ಕೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಪುತ್ತೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿದರು.
ಪುತ್ತೂರು ಪಶು ಸಖಿಯರ ಸಂಯೋಜಕ ಜಗತ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಕೆ., ಪುತ್ತೂರು ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ. ಗೌಡ, ಉಪ್ಪಿನಂಗಡಿ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಉಷಾ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ ಎಚ್., ಕಾಂಗ್ರೆಸ್ ಮುಖಂಡ ಅಮಲ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪಶು ಅಭಿವೃದ್ಧಿ ಪರಿವೀಕ್ಷಕರಾದ ಪ್ರಶಾಂತ್, ಬಸವರಾಜು, ಕಿರಿಯ ಪಶು ಅಭಿವೃದ್ಧಿ ಪರಿವೀಕ್ಷಕ ಪುಂಡರೀಕಾಕ್ಷ, ದ್ವಿತೀಯ ದರ್ಜೆ ಸಹಾಯಕಿ ಪುಷ್ಪಲತಾ, ಎನ್.ಜಿ.ಕುಮಾರ್, ವೀರಪ್ಪ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಪಶು ಅಭಿವೃದ್ಧಿ ಪರಿವೀಕ್ಷಕಿ ಕುಸುi ಪ್ರಾರ್ಥಿಸಿ ಪಾಣಾಜೆ ಪಶು ಆಸ್ಪತ್ರೆಯ ಪಶುವೈದ್ಯಾಧಿಕಾರಿ ಡಾ. ಎಂ.ಪಿ.ಪ್ರಕಾಶ್ ವಂದಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ಕಾರ್ಯಕ್ರಮ ನಿರೂಪಿಸಿದರು.