ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಅಂಗಸಂಸ್ಥೆಯಾಗಿರುವ ಮರಾಟಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.03ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಮಾತೃ ಸಂಘದ ಅಧ್ಯಕ್ಷರಾದ ಮಂಜುನಾಥ್ ಎನ್. ಎಸ್ ವಹಿಸಿ , ಹಾರೈಸಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಗೌರಿ ಬರೆಪ್ಪಾಡಿ , ಮಹಿಳಾ ವೇದಿಕೆಯ ವಾರ್ಷಿಕ ವರದಿಯನ್ನು ವಾಚಿಸಿದರು.
ಯುವ ವೇದಿಕೆಯ ಕಾರ್ಯದರ್ಶಿ ನವೀನ್ ಕುಮಾರ್.ಕೆ. ಚೆನ್ನಾವರ , ಮರಾಟಿ ಯುವ ವೇದಿಕೆಯ ವಾರ್ಷಿಕ ವರದಿ ವಾಚಿಸಿದರು. ಮರಾಟಿ ಯುವ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ವೆಂಕಪ್ಪ ಬರೆಪ್ಪಾಡಿ ಮತ್ತು ಮರಾಟಿ ಮಹಿಳಾ ವೇದಿಕೆಯ ಅಧ್ಯಕ್ಷೆ ಯಮುನಾ ವೈ.ಕೆ ನಾಯ್ಕ್ ಸಹಕಾರ ನೀಡಿ ,ಪ್ರೋತ್ಸಾಹಿಸಿದ ಸಮಾಜ ಭಾಂಧವರಿಗೆ ಧನ್ಯವಾದ ಸಮರ್ಪಿಸಿದರು.
ಸನ್ಮಾನ ಕಾರ್ಯಕ್ರಮ:
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಮಿತಾ ಬೊಳುವಾರು ಹಾಗೂ ಇತ್ತೀಚೆಗೆ ಕುಮಾರಧಾರ ನದಿಯಲ್ಲಿ ಸಂಭವಿಸಿದ ತೆಪ್ಪ ದುರಂತದ ವೇಳೆ, ಈಜಿ ದಡ ಸೇರಿದ ಸುನಂದಾ ಮತ್ತು ವಿದ್ಯಾರಶ್ಮಿ ಇಬ್ಬರು ಸಾಹಸಗಾರ್ತಿಯರನ್ನು ಶಾಲು ಹೊದಿಸಿ, ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಮರಾಟಿ ಮಹಿಳಾ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಆ ಬಳಿಕ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಮಹಿಳಾ ವೇದಿಕೆಗೆ 2023-24ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.
ಈ ವೇಳೆ ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಅಶೋಕ್ ಬಲ್ನಾಡು, ಕೋಶಾಧಿಕಾರಿ ಬಾಬು ನಾಯ್ಕ್ , ಮಹಿಳಾ ವೇದಿಕೆ ಕೋಶಾಧಿಕಾರಿ ಲಲಿತಾ ವೈ, ಯುವ ವೇದಿಕೆ ಕೋಶಾಧಿಕಾರಿ ದಿವ್ಯಾ ಮೇಗಿನಪಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೇತನಾ ಲೋಕಾನಂದ, ಸ್ಮಿತಾ, ಶುಭಾ ಮುಕ್ರಂಪಾಡಿ ಪ್ರಾರ್ಥನೆ ನೆರವೇರಿಸಿದರು.
ಗಿರೀಶ್ ನಾಯ್ಕ್ ಸೊರಕೆ ಕಾರ್ಯಕ್ರಮ ನಿರೂಪಿಸಿದರು. ಲಲಿತಾ ಬಲ್ನಾಡು ಸ್ವಾಗತಿಸಿ, ಗಂಗಾಧರ ಕೌಡಿಚ್ಚಾರು ಧನ್ಯವಾದ ಸಮರ್ಪಿಸಿದರು.