ಮಂಗಳೂರು:ಪುತ್ತೂರು, ಮಂಗಳೂರು, ಬೆಳ್ತಂಗಡಿ, ಚಾರ್ಮಾಡಿ, ಧರ್ಮಸ್ಥಳ ಸಹಿತ ಜಿಲ್ಲೆಯ ಹಲವೆಡೆ ಸೋಮವಾರ ಸಾಧಾರಣ ಮಳೆಯಾಗಿದ್ದು ಮಳೆಯಿಲ್ಲದೆ ಆತಂಕದಲ್ಲಿದ್ದ ಜನತೆಯಲ್ಲಿ ತುಸು ನೆಮ್ಮದಿ ಮೂಡಿಸಿದೆ.ಮುಂದಿನ 2 ದಿನ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಐಎಂಡಿ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಸೋಮವಾರ 6.3 ಸರಾಸರಿ ಮಿಮೀ ಮಳೆಯಾಗಿದೆ.ಪುತ್ತೂರು 4.1ಮಿಮೀ,ಕಡಬ 1.7 ಮಿಮೀ., ಮೂಡುಬಿದಿರೆ 5.3 ಮಿಮೀ, ಸುಳ್ಯ 6.2 ಮಿಮೀ, ಮಂಗಳೂರು 1.8 ಮಿಮೀ, ಬೆಳ್ತಂಗಡಿ 7.1 ಮಿಮೀ, ಬಂಟ್ವಾಳ 6.5 ಮಿಮೀ ಮಳೆಯಾಗಿದೆ.ಸೆ.6ರಿಂದ ಕರಾವಳಿ ಭಾಗಗಳಲ್ಲಿ ಮಳೆ ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ.ಸೆ.6 ಮತ್ತು 7ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.ಸೆ.3ನೇ ವಾರದಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.