ಮಹಿಳೆಯೊಂದಿಗೆ ಬಸ್ಸಿನಲ್ಲಿ ಯುವಕನ ಅನುಚಿತ ವರ್ತನೆ-ದೂರು ದಾಖಲು – ಯುವಕ ಪೊಲೀಸ್‌ ವಶಕ್ಕೆ

0

ಪುತ್ತೂರು: ಬಸ್ಸಿನಲ್ಲಿ ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಯುವಕನ ವಿರುದ್ದ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರು ಪುತ್ತೂರಿನಿಂದ ರಾಜ್ಯ ಸಾರಿಗೆ ನಿಗಮದ ಬಸ್ಸಿನಲ್ಲಿ ಬೆಳ್ಳಾರೆಗೆ ಪ್ರಯಾಣಿಸಿದ್ದು ಬಸ್ಸಿನಿಂದ ಇಳಿಯುವ ವೇಳೆ ಪಕ್ಕದಲ್ಲಿದ್ದ ಯುವಕನೋರ್ವ ಅನುಚಿತವಾಗಿ ವರ್ತಿಸಿ ಚೀಟಿಯೊಂದರಲ್ಲಿ ಮೊಬೈಲ್‌ ನಂಬರ್‌ ಬರೆದು ಮಹಿಳೆಗೆ ನೀಡಿ ಕರೆಮಾಡುವಂತೆ ಕೈ ಸನ್ನೆ ಮಾಡಿರುವುದಾಗಿ ಎಕ್ಸ್‌ ನಲ್ಲಿ(ಟ್ವಿಟರ್) ದೂರು ನೀಡಿದ್ದರು. ಮಹಿಳೆಯ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

LEAVE A REPLY

Please enter your comment!
Please enter your name here