




ಪುತ್ತೂರು: ನಿವೃತ್ತ ಕೆ.ಎಸ್.ಆರ್.ಟಿ.ಸಿ ಚಾಲಕ ಹಾಗೂ ರೋಟರಿಪುರ ನಿವಾಸಿ ಫ್ರಾನ್ಸಿಸ್(ಚಾರ್ಲಿ) ಡಿ’ಕುನ್ಹಾ(68ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.8 ರಂದು ಬೆಳಿಗ್ಗೆ ನಿಧನ ಹೊಂದಿದರು.




ಮೃತ ಫ್ರಾನ್ಸಿಸ್ ಕುಟಿನ್ಹಾರವರು ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಅವರು ಅಪಘಾತರಹಿತ ಚಾಲಕರಾಗಿ ರಾಜ್ಯ ಸರಕಾರದಿಂದ ಚಿನ್ನದ ಪದಕ ಹಾಗೂ ಬೆಳ್ಳಿ ಪದಕಗಳನ್ನು ಗಳಿಸಿಕೊಂಡಿದ್ದರು. ಮೃತ ಫ್ರಾನ್ಸಿಸ್‌ರವರು ಪತ್ನಿ ಎವ್ಲಿನ್ ಮೊರಾಸ್, ಪುತ್ರ ಮಂಗಳೂರು ಧರ್ಮಪ್ರಾಂತ್ಯದ ವೈಸಿಎಸ್ ನಿರ್ದೇಶಕರಾಗಿರುವ ಧರ್ಮಗುರು ವಂ|ರೋಶನ್ ಡಿ’ಕುನ್ಹಾ, ಮತ್ತೋರ್ವ ಪುತ್ರ ರೋಹನ್ ಡಿ’ಕುನ್ಹಾ, ಸೊಸೆ ರೇಶ್ಮಾ ಪ್ರಿಯಾ, ಸಹೋದರರಾದ ಲೂವಿಸ್ ಡಿ’ಕುನ್ಹಾ ರೋಟರಿಪುರ, ಪಾವ್ಲ್ ಡಿ’ಕುನ್ಹಾ ರೋಟರಿಪುರ, ಜೆರೋಮ್ ಡಿ’ಕುನ್ಹಾ ಮಂಗಳೂರುರವರನ್ನು ಅಗಲಿದ್ದಾರೆ.











