ಉಪ್ಪಿನಂಗಡಿ: ಕ್ರೈಸ್ತ ಬಾಂಧವರಿಂದ ತೆನೆ ಹಬ್ಬ

0

ಉಪ್ಪಿನಂಗಡಿ: ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನದ ಅಂಗವಾಗಿ ಇಲ್ಲಿನ ದೀನರ ಕನ್ಯಾ ಮಾತೆ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಮೊಂತಿಫೆಸ್ತ್ (ತೆನೆ) ಹಬ್ಬವನ್ನು ಆಚರಿಸಿದರು.


ಈ ಸಂದರ್ಭ ಚರ್ಚ್‌ನ ಧರ್ಮಗುರು ಅಬೆಲ್ ಲೋಬೋ ವಿಶೇಷ ಪೂಜೆಯನ್ನು ನೆರವೇರಿಸಿ, ಆಶೀರ್ವಚನ ನೀಡಿದರು. ಮೇರಿ ಮಾತೆಯ ವಿಗ್ರಹಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಳಿಕ ಭತ್ತದ ತೆನೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮೆಕ್ಸಿನ್ ಲೋಬೋ, ಶಾಲೆಟ್‌ವಾಸ್ , ವಿನ್ಸಂಟ್ ಮೋರಸ್, ನವೀನ್ ಬ್ರಾಗ್ಸ್, ಮಾರ್ಷಲ್ ವೇಗಸ್, ಜಾನ್ ಕೆನ್ಯೂಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here