(ಸೆ.10): ಇಂದು ಪುತ್ತೂರಿನಲ್ಲಿ ಸಾಕುಪ್ರಾಣಿಗಳ ಪ್ರದರ್ಶನ – ಬೆಸ್ಟ್ ಡಾಗ್ ಆಂಡ್ ಬೆಸ್ಟ್ ಕ್ಯಾಟ್ ಸ್ಪರ್ಧೆ

0

ಪುತ್ತೂರು: ಜೆಸಿಐ ಪುತ್ತೂರು ಮತ್ತು ದಿ ಪುತ್ತೂರು ಕ್ಲಬ್ ಸಹಯೋಗದಲ್ಲಿ, ಜೇಸಿ ಸಪ್ತಾಹದ ಅಂಗವಾಗಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ವಿಶೇಷ ತಳಿಗಳ ಶ್ವಾನ, ಬೆಕ್ಕು ಮೊದಲಾದ ಸಾಕುಪ್ರಾಣಿಗಳ ಪ್ರದರ್ಶನ ಇಂದು (ಸೆ.10) ಮರೀಲ್‌ನ ‘ದಿ ಪುತ್ತೂರು ಕ್ಲಬ್’ನಲ್ಲಿ ನಡೆಯಲಿದೆ.
ಇಂದು ಅಪರಾಹ್ನ 3ರಿಂದ ಸಂಜೆ 7ರವರೆಗೆ ಪೆಟ್‌ಪ್ಲಾನೆಟ್‌ನ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕೋವಿಡ್ ಸಮಯದಲ್ಲಿ ಸಾಕುಪ್ರಾಣಿಗಳನ್ನು ಸಾಕಲಾರದೆ ರಸ್ತೆಗೆ ಬಿಡುವ ಸನ್ನಿವೇಶ ನಿರ್ಮಾಣಗೊಂಡಿತ್ತು. ಇಂತಹ ಸನ್ನಿವೇಶ ಮರುಕಳಿಸಬಾರದೆಂದು ಸಾಕುಪ್ರಾಣಿ ಪ್ರಿಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಕೊಡಗು ಭಾಗಗಳಿಂದ ಪ್ರಾಣಿಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿಜೇತ ಸಾಕುಪ್ರಾಣಿಗಳಿಗೆ ಬಹುಮಾನ ಸೇರಿದಂತೆ ಬೆಸ್ಟ್ ಇನ್ ದ ಶೋ ಮೇಲ್ ಮತ್ತು ಬೆಸ್ಟ್ ಇನ್ ದ ಶೋ ಫಿಮೇಲ್ ಪ್ರಶಸ್ತಿ ನೀಡಲಾಗುವುದು. ಬೆಸ್ಟ್ ಡಾಗ್ ಆಂಡ್ ಬೆಸ್ಟ್ ಕ್ಯಾಟ್ ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here