ಪುತ್ತೂರು ಮೊಸರುಕುಡಿಕೆ ವಿಜೃಂಭಣೆಯ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆ

0


ಅಶ್ವಫ್ರೆಂಡ್ಸ್ ಬೀರ್‍ನಹಿತ್ಲು (ಪ್ರ), ವೀರಸಾರ್ವಕರ್ ಕಲ್ಲುಗುಡ್ಡೆ(ದ್ವಿ)

ಪುತ್ತೂರು: ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಸೆ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 13ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವದಲ್ಲಿ ಪೇಟೆಯುದ್ದಕ್ಕೂ ನಡೆದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಚಿಕ್ಕಮುಡ್ನೂರು ಗ್ರಾಮದ ಅಶ್ವಫ್ರೆಂಡ್ಸ್ ಬೀರ್‍ನಹಿತ್ಲು (ಪ್ರ), ಕಡಬ ಕಲ್ಲುಗುಡ್ಡೆ ವೀರಸಾರ್ವಕರ್ ತಂಡ (ದ್ವಿ) ಮತ್ತು ವಿಷ್ಣು ಫ್ರೆಂಡ್ಸ್ ಕಡಬ ತಂಡ (ತೃ) ಸ್ಥಾನ ಪಡೆದು ಕೊಂಡಿದೆ. ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ 10 ತಂಡ ಹೆಸರು ನೋಂದಾಯಿಸಿತ್ತು. ಆದರೆ ಸ್ಪರ್ಧೆಯಲ್ಲಿ 7 ತಂಡ ಭಾಗವಹಿಸಿದ್ದು, ಅಟ್ಟಿ ಮಡಿಕೆ ಒಡೆಯುವ ಅವಧಿ ಮತ್ತು ಸಮರ್ಪಕವಾಗಿ ಅಟ್ಟಿ ಮಡಿಕೆಯನ್ನು ಒಡೆಯುವ ಅಂಕಗಳೊಂದಿಗೆ ವಿಜೇತ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here