ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿ ಪ್ರಥಮ ವರ್ಷದ ಸಂಭ್ರಮಾಚರಣೆ
ನೆಲ್ಯಾಡಿ: 2022ರ ಸೆ.9ರಂದು ಆರಂಭಗೊಂಡ ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರ ಸಂಘವಾದ ನೆಲ್ಯಾಡಿ ಲೋಟಸ್ ಕಾಂಪ್ಲೆಕ್ಸ್ನಲ್ಲಿರುವ ಕಾಮಧೇನು ಮಹಿಳಾ ಸಹಕಾರ ಸಂಘದ ಪ್ರಥಮ ವರ್ಷದ ಸಂಭ್ರಮಾಚರಣೆ ಸೆ.10ರಂದು ಸಂಘದ ಕಚೇರಿಯಲ್ಲಿ ನಡೆಯಿತು.
ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಬಳಿಕ ನಡೆದ ಸಮಾರಂಭವನ್ನು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಯವರು ಉದ್ಘಾಟಿಸಿ ಮಾತನಾಡಿ, ಉಷಾ ಅಂಚನ್ರವರ ನೇತೃತ್ವದ ಕ್ರೀಯಾಶೀಲ ಆಡಳಿತ ಮಂಡಳಿ ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿದ್ದು ಸಹಕಾರ ತತ್ವದಲ್ಲಿ ಮುಂದುವರಿಯುತ್ತಿದೆ. ಒಂದೇ ವರ್ಷದಲ್ಲಿ ದಾಖಲೆ ವ್ಯವಹಾರ ಮಾಡುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಉಷಾ ಅಂಚನ್ರವರು ಮಾತನಾಡಿ, ಯಾವುದೇ ಸಹಕಾರಿ ಸಂಘದ ಅಭಿವೃದ್ಧಿಗೆ ಠೇವಣಿ ಮುಖ್ಯ. ನೆಲ್ಯಾಡಿ ಹಾಗೂ ಹೊರಗಿನ ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಠೇವಣಿ ಇಟ್ಟು ಸಹಕರಿಸಿದ್ದಾರೆ. ಇದರಿಂದಲೇ ಸಂಘವು ಮೊದಲ ವರ್ಷದಲ್ಲಿಯೇ 6.70 ಕೋಟಿ ರೂ., ದಾಖಲೆ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸಂಘದ ಬೆಳವಣಿಗೆಗೆ ಸಹಕಾರ ಸಂಘಗಳು, ಸಂಘಸಂಸ್ಥೆಗಳೂ ಸಹಕಾರ ನೀಡಿದ್ದಾರೆ. ಗ್ರಾಹಕರೇ ಸಂಘದ ಆಧಾರ ಸ್ತಂಭವಾಗಿದ್ದು ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಂಘವನ್ನು ಮುನ್ನಡೆಸುವುದಾಗಿ ಹೇಳಿದರು. ಉಪ್ಪಿನಂಗಡಿ ಗ್ರಾ.ಪಂ.ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಗೌರಿಜಾಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಪ್ರಿತಾ ರವಿಚಂದ್ರ, ಕಾಮಧೇನು ಮಹಿಳಾ ಸಹಕಾರ ಸಂಘದ ಸಲಹಾ ಸಮಿತಿ ಸದಸ್ಯ ಜನಾರ್ದನ ಬಾಣಜಾಲು, ಡಿಸಿಸಿ ಬ್ಯಾಂಕ್ನ ನಿವೃತ್ತ ಸಿಬ್ಬಂದಿ ಸಿದ್ದಪ್ಪ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಉಪ್ಪಿನಂಗಡಿ ಗ್ರಾ.ಪಂ.ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಾಗೂ ಹಿರಿಯರಾದ ಜಯರಾಮ ಶೆಟ್ಟಿ ಗೌರಿಜಾಲು ಅವರು ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಸಂಘದ ಉಪಾಧ್ಯಕ್ಷೆ ಮೇಘನಾ ಶೈನ್, ನಿರ್ದೇಶಕರಾದ ಮೈತ್ರಿಪುತ್ತಿಗೆ, ರತಿ ಡಿ.ಶಾಂತಿನಗರ, ಶ್ರೀಲತಾ ಸಿ.ಹೆಚ್.ಮಾದೇರಿ, ಜಯಂತಿ ಬಿ.ನಾಯ್ಕ್ ಆಲಂತಾಯ, ಸಂಪಾವತಿ ಪಟ್ಟೆಜಾಲು, ಶಾಲಿನಿಗೋಳಿತ್ತೊಟ್ಟು, ವಾರಿಜಾಕ್ಷಿ ಹೊಸಮನೆ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ನ ಯು.ಪಿ.ಶಾಜಿ ವರ್ಗೀಸ್, ಬೆಥನಿ ವಿದ್ಯಾಸಂಸ್ಥೆಯ ಮನೋಜ್, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ಮಾನಸ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಮಹೇಶ್, ನಾಗೇಶ್ ಉಪ್ಪಿನಂಗಡಿ, ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ಕುಮಾರ್ ದೋಂತಿಲ ಸೇರಿದಂತೆ ಸಂಘದ ಪಿಗ್ಮಿಸಂಗ್ರಾಹಕರು, ಸೇವಾಪ್ರತಿನಿಧಿಗಳು, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈತನ್ಯ ಹೆಚ್.,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.