ವಿಟ್ಲ: ಹಸಿ ಪಪ್ಪಾಯಿ ತಿಂದು ಅಸ್ವಸ್ಥ ಯುವತಿಯ ಸಾವು-ಡೆಂಗ್ಯೂ ಶಂಕೆ

0

ವಿಟ್ಲ: ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬರು ಮನೆಯಲ್ಲಿ ಹಸಿ ಪಪ್ಪಾಯ ತಿಂದು ಚಿಕಿತ್ಸೆ ಫಲಕಾರಿಯಾಗದೆ ಸೆ.12ರಂದು ಮೃತಪಟ್ಟಿದ್ದಾರೆ.


ಪೆರುವಾಯಿ ಮುಕ್ಕುಡಾಪು ನಿವಾಸಿ ಆಶಾ (20 ವ.) ಮೃತಪಟ್ಟವರು. ಅವರಿಗೆ ಜ್ವರ ಬಂದು ಕಡಿಮೆಯಾಗಿತ್ತು. ಸೆ.9ರಂದು ಮನೆಯಲ್ಲಿ ಹಸಿ ಪಪ್ಪಾಯಿಯನ್ನು ತಿಂದ ಬಳಿಕ ಅವರು ವಾಂತಿ ಹಾಗೂ ಅಲರ್ಜಿಗೊಳಗಾಗಿದ್ದರು. ಪುತ್ತೂರು ಆಸ್ಪತ್ರೆಗೆ ಹೋಗುವ ಸಂದರ್ಭ ಕೋಮಾಕ್ಕೆ ಜಾರಿದ್ದು, ಅಲ್ಲಿಂದ ಮಂಗಳೂರಿಗೆ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಈ ಸಂದರ್ಭ ಅವರ ಮುಖ ಊದಿಕೊಂಡಿತ್ತೆನ್ನಲಾಗಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಸೆ.12ರಂದು ಮೃತಪಟ್ಟಿದ್ದಾರೆ. ಅವರಿಗೆ ಡೆಂಗ್ಯು ದೃಢವಾಗಿದ್ದರಿಂದ ಅದರಿಂದಲೇ ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಆಕೆ ಕೆಲಸವನ್ನು ಮಂಗಳೂರಿನಲ್ಲಿ ಮಾಡುತ್ತಿದ್ದ ಕಾರಣ ಅಲ್ಲೇ ಡೆಂಗ್ಯು ಜ್ವರ ತಗುಲಿರುವ ಸಾಧ್ಯತೆಯಿದೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here