ಅ.6,7 : ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

0

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಳ್ವಾಸ್ ಪ್ರಗತಿ -2023 ಬೃಹತ್ ಉದ್ಯೋಗ ಮೇಳವು ಅಕ್ಟೋಬರ್ 6 ಮತ್ತು 7 ರಂದು ಮೂಡಬಿದ್ರೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಪ್ರತಿಷ್ಠಾನದ ಸಾಮಾಜಿಕ ಜವಾಬ್ದಾರಿ ಚಟುವಟಿಕೆಯ ಅಂಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಉದ್ಯೋಗಿಕ ನೆರವನ್ನು ಆಳ್ವಾಸ್ ಪ್ರಗತಿ ಮೂಲಕ ಪ್ರತಿಷ್ಠಾನ ವ್ಯವಸ್ಥಿತವಾಗಿ ಮಾಡುತ್ತಿದೆ. ಈ ಬಾರಿ 13ನೇ ಆವೃತ್ತಿಯಲ್ಲಿ ಅತ್ಯುನ್ನತ ಉದ್ಯೋಗ ವಲಯಗಳಾದ ಬಿ ಎಫ಼್ ಯಸ್ ಐ, ಐಟಿ , ಉತ್ಪಾದನಾ ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಟೆಲಿ ಕಮ್ಯುನಿಕೇಷನ್, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ, ಸರ್ಕಾರೇತರ ಸಂಸ್ಥೆ ಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.


ಪದವಿ, ಸ್ನಾತಕೋತ್ತರ ಪದವಿಗಳಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ ,ಡಿಪ್ಲಮಾ ಹಾಗೂ ಪಿ.ಯು.ಸಿ, ಎಸ್.ಎಸ್.ಎಲ್.ಸಿ ಮತ್ತು ಇತರ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳ ಬಹುದು ಎಂದರು.


ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು 5 ರಿಂದ 10 ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಗಳು, ಅಂಕಪಟ್ಟಿಗಳ, ಜೆರಾಕ್ಸ್ ಪ್ರತಿ, ಸ್ವ ವಿವರದ ಮಾಹಿತಿ, ಅನ್ ಲೈನ್ ನೋಂದಣಿ ನಂಬರ್ ಹೊಂದಿರಬೇಕು. ಅ.6 ರಂದು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕುರಿಯನ್, ಉದ್ಯೋಗ ಮತ್ತು ತರಬೇತಿ ವಿಭಾಗ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.


ಹೆಚ್ಹಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ:
9008907716, 9663190590 ಮತ್ತು ಕಂಪನಿಗಳ ಮಾಹಿತಿಗೆ ಮೊಬೈಲ್ ಸಂಖ್ಯೆ: 8971250414 ಸಂಪರ್ಕಿಸಬಹುದು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳ ಸ್ಪಷ್ಟ ವಿವರ ಹಾಗೂ ಇತರ ಮಾಹಿತಿಗಳು ವೆಬ್‌ಸೈಟ್ www.alvaspragati.com ನಲ್ಲಿ ಲಭ್ಯವಿದ್ದು, ಉದ್ಯೋಗಾಕಾಂಕ್ಷಿಗಳು ಉಚಿತವಾಗಿ ನೋಂದಣಿ ಮಾಡಬಹುದಾಗಿದೆ. ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅ.5ರಿಂದ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ, ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ವಿವೇಕ್ ಆಳ್ವಾ ತಿಳಿಸಿದರು.


ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು:
ಐಸಿಐಸಿಐ, ಆಕ್ಸಿಸ್, ಇಂಡಸ್ ಇಂಡ್ ಸಹಿತ ವಿವಿಧ ಬ್ಯಾಂಕ್‌ಗಳು, ವೋಲ್ಟ್ ಏಸ್ ಡಿಸೈನರ್, ಸನ್ನೆರಾ ಇಂಜಿನಿಯರಿಂಗ್ ಮೊದಲಾದ ಉತ್ಪಾದನಾ ವಲಯದ ಕಂಪನಿಗಳು, ಗಲ್ಫ್ ಬಹುರಾಷ್ಟ್ರೀಯ ಕಂಪನಿಗಳು, ಟೊಯೊಟಾ ಇಂಡಸ್ಟ್ರೀಸ್, ವೋಲ್ಟ್ ಟ್ರಿಕ್ಸ್, ಸನ್‌ಇಲೆಕ್ಟಿಕ್ ಉಷಾ ಆರ್ಮ್, ಕೈಯನ್ಸ್ ಟೆಕ್ನಾಲಜಿ, ಟಿವಿಎಸ್ ಮೋಟಾರ್ ಸ್ಲಿಪ್‌ಕಾರ್ಟ್, ಅಮೆಜಾನ್, ದಿಯಾ ಸಿಸ್ಟಮ್ಸ್, ಆಂಥೆಮ್ ಬಯೋಸೈನ್ಸ್, ಎಂಎಸ್ಸೆನ್ ಲ್ಯಾಬ್, ಕೆಎಂಸಿ ಆಸ್ಪತ್ರೆ, ಎ.ಜೆ. ಆಸ್ಪತ್ರೆ, ಅಪೋಲೊ ಹೋಮ್ ಹೆಲ್ತ್ ಕೇರ್, ಲ್ಯಾಂಡ್‌ಮಾರ್ಕ್ ಗ್ರೂಪ್, ಆಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ನಂದಿ ಟೊಯೋಟಾ, ಮಹೀಂದ್ರಾ, ಮಾಂಡೋವಿ ಮೋಟಾರ್, ದೇಶಪಾಂಡೆ ಫೌಂಡೇಶನ್, ಗೋವನ್ ಇನ್‌ಸ್ಟಿಟ್ಯೂಟ್ ಕೊಚ್ಚಿನ್, ವಿವಿಧ ಮಾಧ್ಯಮ ಸಂಸ್ಥೆಗಳು ಭಾಗವಹಿಸಲಿವೆ.

LEAVE A REPLY

Please enter your comment!
Please enter your name here