5 ವರ್ಷ ರಸ್ತೆ ನಿರ್ವಹಣೆ ಹೊಣೆ ಗುತ್ತಿಗೆದಾರರಿಗೆ-ಹೊಸ ನಿಯಮ ಶೀಘ್ರ:ಸಚಿವ ಸತೀಶ್ ಜಾರಕಿಹೊಳಿ

0

ಬೆಂಗಳೂರು:ರಾಜ್ಯದ ರಸ್ತೆಗಳನ್ನು ನಿರ್ಮಿಸಿದ ಗುತ್ತಿಗೆದಾರರೇ ಐದು ವರ್ಷಗಳವರೆಗೆ ರಸ್ತೆಗಳ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಇಲ್ಲಿಯವರೆಗೆ ಈ ನಿಯಮ ಇರಲಿಲ್ಲ.ಇನ್ನು ಮುಂದೆ ನಿರ್ವಹಣೆ ಹೊಣೆಯನ್ನು ಗುತ್ತಿಗೆದಾರರಿಗೇ ನೀಡಲಾಗುವುದು.ಈ ಉದ್ದೇಶಕ್ಕೆ ಇನ್ನು ಟೆಂಡರ್ ಆಹ್ವಾನಿಸುವುದಿಲ್ಲ ಎಂದರು. ಲೋಕೋಪಯೋಗಿ ಇಲಾಖೆಯಲ್ಲಿ ಸುಧಾರಣೆ ತರಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.ತಂತ್ರಾಂಶ ಸಿದ್ಧಪಡಿಸುತ್ತಿದ್ದು, ಪ್ರಾಥಮಿಕ ಹಂತದಲ್ಲಿದೆ.ಇದು ಅನುಷ್ಠಾನಕ್ಕೆ ಬಂದರೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವರು ಹೇಳಿದರು.ಆದರೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ. ಏನೆಲ್ಲ ಪ್ರಯೋಜನ ಆಗಲಿದೆ ಎಂಬ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ.

LEAVE A REPLY

Please enter your comment!
Please enter your name here