ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆಯಲ್ಲಿ 2023-24 ನೇ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಇತ್ತೀಚೆಗೆ ನಡೆಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉಮ್ಮರ್ ಫಾರೂಕ್, ಉಪಾಧ್ಯಕ್ಷರಾಗಿ ಜಲಜಾಕ್ಷಿ, ವೆಂಕಪ್ಪನಾಯ್ಕ ಮತ್ತು ಶ್ರೀಮತಿ ಶೋಭಾಲತಾ ಆರ್. ಆಯ್ಕೆಯಾದರು.
ಸದಸ್ಯರುಗಳಾಗಿ ಪ್ರೀತಿ, ಮಂಜಪ್ಪ, ಶಶಿಧರ, ಕವಿತಾ, ಇಸ್ಮಾಯಿಲ್, ಸೆಕಿನಾ, ಜುಬೈರಾ, ರಾಮಣ್ಣ ನಾಯ್ಕ, ಶ್ರೀಧರ ಭಟ್, ಸೌಮ್ಯಲತಾ ಎನ್., ಸುಗುಣ, ಆಲಿಕುಂಞಿ, ಅಬ್ದುಲ್ ಅಝೀಝ್, ಬಾಬು ನಾಯ್ಕ, ಯಶೋಧ, ಅನಿತಾ ಮತ್ತು ಮಂಜುನಾಥ ಆಯ್ಕೆಯಾದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು 2022-23 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣಭಟ್ ಬಿ. ವಹಿಸಿದರು. ನವೋದಯ ವಿದ್ಯಾಸಮಿತಿಯ ಸಂಚಾಲಕ ಡಾ. ಶ್ರೀಕೃಷ್ಣಭಟ್ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭಹಾರೈಸಿದರು. ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ ಶಾಲಾ ಶೈಕ್ಷಣಿಕ ಪ್ರಗತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ನವೋದಯ ವಿದ್ಯಾಸಮಿತಿಯ ಕಾರ್ಯದರ್ಶಿ ನಾರಾಯಣ ಭಟ್ ಸಹಕಾರವನ ಉಪಸ್ಥಿತರಿದ್ದರು. ಮುಖ್ಯಗುರು ಪುಪ್ಪಾವತಿ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಬಿ. ಸ್ವಾಗತಿಸಿ, ಸಹಶಿಕ್ಷಕಿ ಪ್ರವೀಣ ಕುಮಾರಿ ವಂದಿಸಿದರು. ಸಹಶಿಕ್ಷಕ ರಾಧಾಕೃಷ್ಣ ಆರ್. ಸಹಕರಿಸಿದರು. ಸಹಶಿಕ್ಷಕಿ ಸುಮಂಗಲಾ ಕೆ. ಕಾರ್ಯಕ್ರಮ ನಿರೂಪಿಸಿದರು.