ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶ್ರೀ ಗಣೇಶೋತ್ಸವ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

0

ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶ್ರೀ ಗಣೇಶೋತ್ಸವ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಸೆ.15 ರಂದು ನಡೆಯಿತು.ಶಾಂತಿ ಸಭೆಯಲ್ಲಿ ಮಾತನಾಡಿದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರು ,ಗಣೇಶೋತ್ಸವ ಹಬ್ಬವನ್ನು ಇಲಾಖೆಯ ಅನುಮತಿಯೊಂದಿಗೆ ಆಚರಿಸಬೇಕು.ಗಣೇಶನ ಮೂರ್ತಿಯನ್ನು ವಿವಾದಿತ ಸ್ಥಳದಲ್ಲಿ ಸ್ಥಾಪನೆ ಮಾಡಬಾರದು.ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಬಾರದು.ಶಾಂತಿಯುತವಾಗಿ ಹಬ್ಬವನ್ನು ನಡೆಸಬೇಕು.ಅಗ್ನಿಶಾಮಕ ದಳ ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು ಎಂದು ಮೇಲಾಧಿಕಾರಿಗಳ ಸುತ್ತೋಲೆಯಲ್ಲಿರುವ ಮಾಹಿತಿಯನ್ನು ನೀಡಿದರು.

ಶೋಭಾಯಾತ್ರೆಯ ಸಂದರ್ಭದಲ್ಲಿ ಡಿಜೆಯನ್ನು ಹಾಕುವಂತಿಲ್ಲ.ಹೆಚ್ಚು ಸೌಂಡ್ ಧ್ವನಿವರ್ಧಕ ಬಳಸಬಾರದು ಎಂದು ನವೀನ್ ಚಂದ್ರ ಜೋಗಿ ಹೇಳಿದರು.ಈದ್ ಮಿಲಾದ್ ಹಬ್ಬವನ್ನು ಕೂಡಾ ಶಾಂತಿ ಸೌಹಾರ್ದತೆಯಿಂದ ನಡೆಸಬೇಕು ಎಂದು ಹೇಳಿದರು.ಎರಡೂ ಹಬ್ಬಗಳ ಸಂದರ್ಭದಲ್ಲಿ ಯಾವುದೇ ತೊಂದರೆಗಳು,ಸಮಸ್ಯೆಗಳು ಆದರೆ ಕೂಡಲೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.ಕಾನೂನು ಮತ್ತು ಸುವ್ಯವಸ್ಥೆ ಎಸ್.ಐ.ಸಂತೋಷ್ ಬಿ.ಪಿ.ಉಪಸ್ಥಿತರಿದ್ದು ಮಾತನಾಡಿದರು.

 ಸಭೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಸವಣೂರು, ಬೆಳಂದೂರು,ಬೆಳ್ಳಾರೆ,ಕಾಣಿಯೂರು,ಅಂಕತ್ತಡ್ಕ ,ಪಾಲ್ತಾಡಿ,ಪುಣ್ಚಪ್ಪಾಡಿ,ಬಾಳಿಲ,ಐವರ್ನಾಡು ,ಅಮರಮುಡ್ನೂರು,ಕಳಂಜ ಮೊದಲಾದ ಭಾಗದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ,ಮಸೀದಿಯ  ಮುಖಂಡರು,ಸಂಘ ಸಂಸ್ಥೆಗಳ ಪದಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here