ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.26.33 ಲಕ್ಷ ಲಾಭ, ಶೇ.13 ಡಿವಿಡೆಂಟ್ – ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕೆ ಘೋಷಣೆ
ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿ ಮತ್ತು ವಿಟ್ಲದಲ್ಲಿ ಶಾಖಾ ಕಚೇರಿ ಹೊಂದಿದ್ದು ಉತ್ತಮವಾಗಿ ವ್ಯವಹಾರ ನಡೆಸುತ್ತಿರುವ ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘವು ವಷಾಂತ್ಯಕ್ಕೆ ರೂ. 26,33,398. 45 ಗಳಿಸಿದೆ. ಲಾಭವನ್ನು ಉಪ ನಿಬಂಧನೆಯಂತೆ ಹಂಚಲಾಗಿದ್ದು, ಸದಸ್ಯರ ಅನುಮತಿ ಪಡೆದು ಶೇ.13ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕೆ ಅವರು ಘೋಷಣೆ ಮಾಡಿದರು.


ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್ನಲ್ಲಿ ಸಂಘದ ಕೇಂದ್ರ ಕಚೇರಿಯ ಬಳಿಯ ಸಭಾಂಗಣದಲ್ಲಿ ಸೆ.16 ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯಲ್ಲಿ ಈಗಾಗಲೇ 2854 ಸದಸ್ಯರಿದ್ದು, ಪಾಲು ಬಂಡವಾಳ ರೂ.30,90,300 ಹೊಂದಿದ್ದು, ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಅರ್ಹ ಕುಟುಂಬದ ಸದಸ್ಯರನ್ನು ಸಂಘದ ಸದಸ್ಯತ್ವಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈಗಿರುವ ಸ್ವಸಹಾಯ ಗುಂಪುಗಳನ್ನು ವೃದ್ಧಿಸಿ ಗುಂಪುಗಳಿಗೆ ಸಕಾಲದಲ್ಲಿ ಸಾಲ ಒದಗಿಸಲು ಮತ್ತು ಸಂಘದ ಕಾರ್ಯವ್ಯಾಪ್ತಿಯಲ್ಲಿ ಹೆಚ್ಚು ಗುಂಪುಗಳನ್ನು ರಚಿಸಲು ಸಿಬ್ಬಂದಿಗಳಿಗೆ, ಪ್ರೇರಕರಿಗೆ, ಶಾಖೆಗಳಿಗೆ ನಿರ್ದೇಶನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ನಿವೇಶನ ಖರೀದಿಸುವ ಯೋಜನೆ ಹೊಂದಿದ್ದೇವೆ ಎಂದ ಅವರು ಸಂಘದ ಒಟ್ಟು ವ್ಯವಹಾರದಿಂದ ಬಂದಿರುವ ಲಾಭಕ್ಕೆ ಸಂಬಂಧಿಸಿ ಶೇ.13 ಡಿವಿಡೆಂಡ್ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮಂಜುನಾಥ್ ವಾರ್ಷಿಕ ವರದಿ ಸೇರಿದಂತೆ ವಿವಿಧ ನಿಯಮಾವಳಿಗಳನ್ನು ಸಭೆಗೆ ಮಂಡಿಸಿ ಸಭೆಯಿಂದ ಅನುಮೋದನೆ ಪಡೆದರು.


ಸ್ಪರ್ಧಾತ್ಮಕ ಮನೋಭಾವ ಇರಲಿ:
ಸದಸ್ಯರಾದ ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ನಲ್ಕ ಗೋಪಾಲಕೃಷ್ಣ ಆಚಾರ್ಯ, ರಾಧಾಕೃಷ್ಣ ನಾಕ್, ಫ್ರಾನ್ಸಿಸ್ ಲೋಬೊ, ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಭಟ್ ವಿವಿಧ ಸಲಹೆ ಸೂಚನೆ ನೀಡಿದರು. ಸಹಕಾರಿ ಸಂಘಗಳು ಸ್ಪರ್ಧಾತ್ಮಕ ಮನೋಭಾವಿದಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದ ಅವರು ಠೇವಣಿ ಮೇಲಿನ ಬಡ್ಡಿದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವಂತೆ ವಿನಂತಿಸಿದರು. ಸಂಘದ ಅಧ್ಯಕ್ಷ ಈ ಕುರಿತು ಆಡಳಿತ ಮಂಡಳಿ ಚರ್ಚಿಸುತ್ತೇವೆ ಎಂದರು. ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಶಕುಂತಳಾ ಟಿ ಶೆಟ್ಟಿ, ಕೆ.ಸಂಜೀವ ನಾಯಕ್, ವಿಶ್ವನಾಥ ರೈ ಎಮ್.ಬಿ, ಗಂಗಾರತ್ನ ವಿ ರೈ ಎಮ್, ಸರಸ್ವತಿ ಇ ಭಟ್, ರಘುರಾಮ ರೈ, ಚಿದಾನಂದ ಸುವರ್ಣ ಜಿ, ಜೋನ್ ಡಿ ಸೋಜ, ಲೋಕೇಶ್ ಹೆಗ್ಡೆ ಯು, ಜನಾರ್ಧನ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಸಹಾಯ ಗುಂಪಿನ ಶಶಿಕಲಾ ಪ್ರಾರ್ಥಿಸಿದರು. ನಿರ್ದೇಶಕರಾದ ಪಟೇಲ್ ಗೋಪಾಲಕೃಷ್ಣ ಗೌಡ ಸ್ವಾಗತಿಸಿ, ಬಾಲಕೃಷ್ಣ ಕೆ ಬೋರ್ಕರ್ ವಂದಿಸಿದರು. ವಿಟ್ಲ ಶಾಖಾ ಮೆನೇಜರ್ ಲಕ್ಷ್ಮೀರಾಜ್, ಪುತೂರು ಶಾಖೆಯ ಸುಮಿತ್ರ, ಮಂಗಳ, ಮಮತ, ಗೌತಮ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here