ಫಿಲೋಮಿನಾ ಗಣೇಶೋತ್ಸವದ ವೈಭವದ ಶೋಭಾಯಾತ್ರೆ

0

ಆರು ಸಾವಿರಕ್ಕೂ ಮಿಕ್ಕಿ ಭಕ್ತರಿಂದ ಅನ್ನಸಂತರ್ಪಣೆ

ಪುತ್ತೂರು: ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ 41ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೆ.19 ಹಾಗೂ 20 ರಂದು ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ನಡೆದಿದ್ದು, ಈ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.20 ರಂದು ನಡೆಯುತು.

ವೈಭವದ ಶೋಭಾಯಾತ್ರೆ:
ಅರ್ಚಕರಾದ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಶ್ರೀ ಗಣೇಶನ ಪ್ರತಿಷ್ಠಾಪನೆ ಬಳಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ರಂಗಪೂಜೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. ಬುಧವಾರ ಮಧ್ಯಾಹ್ನ ಸುಮಾರು ಆರು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಂಜೆ ಅರ್ಚಕ ಪ್ರೀತಂ ಪುತ್ತೂರಾಯರವರು ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದ್ದು, ಬಳಿಕ ವೈಭವದ ಶೋಭಾಯಾತ್ರೆಯು ದರ್ಬೆ-ಕಲ್ಲಾರೆ-ಬಸ್‌ಸ್ಟ್ಯಾಂಡ್ ಮುಖ್ಯರಸ್ತೆಯಾಗಿ ಸಾಗಿ ಬೊಳುವಾರು ಮೂಲಕ ಹಾರಾಡಿಯಲ್ಲಿರುವ ಬಾವಿಯಲ್ಲಿ ಶ್ರೀ ಗಣೇಶನನ್ನು ವಿಸರ್ಜನೆ ಕಾರ್ಯ ನಡೆಯಿತು . ಶೋಭಾಯಾತ್ರೆಯುದ್ದಕ್ಕೂ ಪಟಾಕಿ ಸಿಡಿತ, ಚೆಂಡೆ ವಾದ್ಯ ಹಾಗೂ ಎಸ್.ಆರ್.ಕೆ ಪುತ್ತೂರು, ಟೀಮ್ ಶಬರೀಶ್ ತಂಡದ ಬ್ಯಾಂಡ್‌ನೊಂದಿಗೆ ವಾದ್ಯ, ಭಗವಾಧ್ವಜದೊಂದಿಗೆ ಕೇಸರಿ ಬಾವುಟಗಳು ಶೋಭಾಯಾತ್ರೆಗೆ ರಂಗೇರಿಸಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಶೋಭಾಯಾತ್ರೆಯುದ್ದಕ್ಕೂ ಕುಣಿಯುತ್ತಾ ಸಾಗಿದ್ದು ಗಣೇಶೋತ್ಸವ ಸಂಭ್ರಮವನ್ನು ದ್ವಿಗುಣಗೊಳಿಸಿದೆ.

ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಶಿವಪ್ರಸಾದ್ ಎ, ಕೋಶಾಧಿಕಾರಿ ದುರ್ಗಾಪ್ರಸಾದ್, ಟ್ರಸ್ಟಿಗಳಾದ ಡಾ.ಅಶೋಕ್ ಕುಮಾರ್ ರೈ, ಮಂಜುನಾಥ್ ಡಿ, ಸಿಎ ಅನಂತಪದ್ಮನಾಭ ಕೆ, ವಿಶ್ವಾಸ್ ಶೆಣೈ, ಶ್ರೀಧರ ಹೆಗ್ಡೆ, ಜನಾರ್ದನ ಎಸ್.ಭಟ್, ವೆಂಕಟಕೃಷ್ಣ ಎಂ.ಎನ್, ದಿನೇಶ್ ಪ್ರಸನ್ನ, ನಾಗೇಶ್ ಪೈ, ಬೆಟ್ಟ ಪಿ.ಎಸ್ ನಾಗಾರಾಜ, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ಹರಿಣಿ ಪುತ್ತೂರಾಯ, ವೇಣುಗೋಪಾಲ್ ಪಿ.ಎಲ್, ಕೆ.ವಿಶ್ವಾಸ್ ಶೆಣೈ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಕ್ರಂ ಆಳ್ವ, ಕಾರ್ಯದರ್ಶಿ ಹೃದಯ್ ಎಸ್.ನಾಕ್, ಜೊತೆ ಕಾರ್ಯದರ್ಶಿ ರಕ್ಷಾ ಅಂಚನ್ ಹಾಗೂ ಸದಸ್ಯರು ಸಹಿತ ಸಾವಿರಾರು ಮಂದಿ ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

-ಅರ್ಚಕ ಪ್ರೀತಂ ಪುತ್ತೂರಾಯರವರು ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ
-ಶೋಭಾಯಾತ್ರೆಯು ದರ್ಬೆ-ಕಲ್ಲಾರೆ-ಬಸ್‌ಸ್ಟ್ಯಾಂಡ್ ಮುಖ್ಯರಸ್ತೆಯಾಗಿ ಸಾಗಿ ಬೊಳುವಾರು ಮೂಲಕ ಹಾರಾಡಿಯಲ್ಲಿರುವ ಬಾವಿಯಲ್ಲಿ ಶ್ರೀ ಗಣೇಶನ ವಿಸರ್ಜನೆ
-ಶೋಭಾಯಾತ್ರೆಯುದ್ದಕ್ಕೂ ಪಟಾಕಿ ಸಿಡಿತ, ಚೆಂಡೆ ವಾದ್ಯ ಹಾಗೂ ಎಸ್.ಆರ್.ಕೆ ಪುತ್ತೂರು, ಟೀಮ್ ಶಬರೀಶ್ ತಂಡದ ಬ್ಯಾಂಡ್
-ಭಗವಾಧ್ವಜದೊಂದಿಗೆ ಕೇಸರಿ ಬಾವುಟಗಳು ಶೋಭಾಯಾತ್ರೆಗೆ ರಂಗೇರುವಿಕೆ
-ಶೋಭಾಯಾತ್ರೆಯುದ್ದಕ್ಕೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿಗಳಿಂದ ಆಕರ್ಷಕ ಹೆಜ್ಜೆ ಕುಣಿತ
-ಸಂಭ್ರಮದ ಗಣೇಶೋತ್ಸವಕ್ಕೆ ಹಿರಿಯ ವಿದ್ಯಾರ್ಥಿಗಳು ಸಾಥ್

LEAVE A REPLY

Please enter your comment!
Please enter your name here