ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಮಹಾಸಭೆ

0

34.45 ಲಕ್ಷ ರೂ. ನಿವ್ವಳ ಲಾಭ, ಶೇ. 16 ಡಿವಿಡೆಂಡ್ ಘೋಷಣೆ

ಪುತ್ತೂರು; ಇಲ್ಲಿನ ಸಿ.ಪಿ.ಸಿ, ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 21 ನೇ ವರ್ಷದ ಮಹಾಸಭೆಯು ಸೆ. 17 ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು.


ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷೆ ಕೆ.ಕಸ್ತೂರಿ ಪ್ರಭುರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು 2022-23ನೇ ಸಾಲಿನಲ್ಲಿ 9, 36,50,161.20 ರೂ, ಠೇವಣಾತಿ ಹೊಂದಿದ್ದು, 8,90, 62,810.00 ರೂ ಸಾಲ ವಿತರಣೆ ಮಾಡಲಾಗಿದೆ. 34, 45,631.01 ರೂ. ನಿವ್ವಳ ಲಾಭ ಬಂದಿರುತ್ತದೆ, ಈ ಬಾರಿ ಸದಸ್ಯರಿಗೆ ಶೇ. 16 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು. ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯು 2002 ನವೆಂಬರ್ 25 ರಂದು ಉದ್ಘಾಟನೆಗೊಂಡಿದ್ದು, 2808 ಮಂದಿ ಸದಸ್ಯರುಗಳು ಇದ್ದು, 68,73,800.00 ರೂ ಪಾಲು ಬಂಡವಾಳ ಇದೆ ಎಂದರು.


ಸಹಕಾರಿಯ ನಿಧಿಗಳು: ವರ್ಷದ ಆರಂಭದಲ್ಲಿ ಸಹಕಾರಿಯ ನಿಧಿಗಳು ರೂ-1,64,15,845,29 ಆಗಿದ್ದು, ವರ್ಷಾಂತ್ಯದಲ್ಲಿ ರೂ 1,80,21,660.23 ಕ್ಕೆ ಏರಿರುತ್ತದೆ, ಇದರಲ್ಲಿ ಸಹಕಾರಿ ಕ್ಷೇತ್ರದ ನಿಧಿಯು ರೂ-65,73,880.23 ಮತ್ತು ಇತರ ನಿಧಿಗಳು ರೂ-1,04,47,780.00 ಆಗಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ಅಭಿನಂದನೆ- ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ, ಸಂಸ್ಥೆಯ ಸಿಬ್ಬಂದಿಗಳಾದ ನಳಿನಾಕ್ಷಿ , ದೀಕ್ಷಿತಾ ಮತ್ತು ಸಂಸ್ಥೆಯ ಪಿಗ್ಮಿ ಸಂಗ್ರಾಹಕರಾದ ಸತೀಶ್ ಪ್ರಭು ಮಣಿಯ, ಶ್ರೀಧರ್, ದಿನೇಶ್ ಹಾಗೂ ಸಾಲ ನೀಡುವಿಕೆ ಮತ್ತು ವಸೂಲಾತಿಯಲ್ಲಿ ಉತ್ತಮ ರೀತಿಯಲ್ಲಿ ಸಂಸ್ಥೆಗೆ ಸಹಕಾರ ನೀಡಿದ 10 ಮಂದಿ ಸದಸ್ಯರನ್ನು ಅಭಿನಂದಿಸಲಾಯಿತು.


ಸಂಸ್ಥೆಯ ಉಪಾಧ್ಯಕ್ಷ ಎನ್. ಸುಭಾಷ್ ನಾಯಕ್ , ನಿರ್ದೇಶಕರುಗಳಾದ ವಸಂತ ಬಿ. ಎ. ಮನೋಜ್ ಕುಮಾರ್, ದೀಪಾ ಪ್ರಭು, ಯು.ಬಾಲಕೃಷ್ಣ ನಾಯಕ್, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಪ್ರಭು, ರಾಜರಾಮ್ ಪ್ರಭು, ಯಶವಂತ ನಾಯಕ್, ಶಿವಾನಂದ ನಾಯಕ್, ಶಿವರಾಮ ಪ್ರಭು, ಸುಮಿತ್ರ ಪಿ, ಯತೀಂದ್ರನಾಥ್, ವಿದ್ಯಾ ನಾಯಕ್ ಉಪಸ್ಥಿತರಿದ್ದರು.
ಸದಸ್ಯ ಶ್ರೀನಿವಾಸ್ ಸಾಮಂತ್‌ರವರು ವಿವಿಧ ಸಲಹೆ ಸೂಚನೆಯನ್ನು ನೀಡಿದರು.ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ ವರದಿ ವಾಚಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ನಳಿನಾಕ್ಷಿ , ದೀಕ್ಷಿತಾರವರು ವಿವಿಧ ಕಾರ‍್ಯಕ್ರಮ ನಿರೂಪಿಸಿದರು.
ದಿನೇಶ್ ಪ್ರಾರ್ಥನೆಗೈದರು. ಸಂಸ್ಥೆಯ ಪಿಗ್ಮಿ ಸಂಗ್ರಾಹಕ ಸತೀಶ್ ಪ್ರಭು ಮಣಿಯ ಸ್ವಾಗತಿಸಿ, ವಂದಿಸಿದರು.

ಗ್ರಾಹಕರ ನಿರಂತರ ಸಹಕಾರದಿಂದ ಅಭಿವೃದ್ಧಿ
ಪುತ್ತೂರಿನ ಸಿಪಿಸಿ ಸಂಕೀರ್ಣದಲ್ಲಿ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಹಕಾರಿಯ ನಿಯಮಗಳಿಗನುಸಾರವಾಗಿ ಸದಸ್ಯರಿಗೆ ಶೀಘ್ರವಾಗಿ ಸಾಲ ನೀಡಲಾಗುವುದು. ಚಿನ್ನಾಭರಣಗಳನ್ನು ಭದ್ರತೆಯಾಗಿಡಲು ಬೇಕಾದ ಸೇಫ್ ಲಾಕರಿನ ವ್ಯವಸ್ಥೆ ಕೂಡ ಇದ್ದು, ಸದಸ್ಯರಿಗೆ ಬಾಡಿಗೆ ನೆಲೆಯಲ್ಲಿ ಭದ್ರಕೋಶವನ್ನು ನೀಡುವ ವ್ಯವಸ್ಥೆ ಇದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿ.
ಕೆ.ಕಸ್ತೂರಿ ಪ್ರಭು. ಅಧ್ಯಕ್ಷರು,
ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು

LEAVE A REPLY

Please enter your comment!
Please enter your name here