ಪುತ್ತೂರು: ವಿಟ್ಲ ಮತ್ತು ಪುತ್ತೂರಿನ ಕಲಾವಿದರಿಂದಲೇ ನಿರ್ಮಾಣಗೊಂಡಿರುವ “ಆರಾರಿರಾರೋ” ಸೆಪ್ಟೆಂಬರ್ 22 ಶುಕ್ರವಾರದಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.ಸಂದೀಪ್ ಶೆಟ್ಟಿ ವಿಟ್ಲ ಇವರ ನಿರ್ದೇಶನದ ಸಿನೆಮಾದಲ್ಲಿ ಪ್ರಸನ್ನ ಶೆಟ್ಟಿ ಮತ್ತು ನಿರೀಕ್ಷ ಶೆಟ್ಟಿ ಪುತ್ತೂರು ಅಭಿನಯಿಸಿದ್ದಾರೆ.
ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ವಿಶೇಷ ಪ್ರಶಂಸೆಗೊಳಗಾದ ಹಾಗೂ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ವಿಶೇಷ ಪ್ರದರ್ಶನಗೊಂಡು ಜನರ ಮೆಚ್ಚುಗೆಯನ್ನು ಪಡೆದು ಮಹಿಳೆಯರು ಚಿತ್ರ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೆ.22ರಂದು ಸಿನೆಮಾವು ಮಂಗಳೂರು ಮತ್ತು ಪುತ್ತೂರು ಭಾರತ್ ಸಿನೆಮಾಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.ಚಿತ್ರವನ್ನು ವೀಕ್ಷಿಸಿ ಚಿತ್ರ ತಂಡಕ್ಕೆ ಪ್ರೋತ್ಸಾಹಿಸಿ ಎಂದು ಚಿತ್ರ ತಂಡ ವಿನಂತಿಸಿದೆ.