ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಗಣೇಶೋತ್ಸವ

0

ಧಾರ್ಮಿಕ ಸಭಾ ಕಾರ್ಯಕ್ರಮ,ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ


ಕಾವು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 40ನೇ ವರ್ಷದ ಗಣೇಶೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಪಂಚಲಿಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.ಅರ್ಚಕರಾದ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಗಣೇಶ ವಿಗ್ರಹ ಪ್ರತಿಷ್ಠೆ, ,ಗಣಹೋಮ, ಮಹಾಪೂಜೆ ನಡೆಯಿತು.


ಭಗವಾಧ್ವಜಾರೋಹಣ
ವಿಗ್ರಹ ಪ್ರತಿಷ್ಠೆ ಬಳಿಕ ಭಗವಾಧ್ವಜಾರೋಹಣ ನಡೆಯಿತು.ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಧ್ವಜಾರೋಹಣ ನಡೆಸಿದರು.


ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ ಗಣೇಶೋತ್ಸವವು ಧಾರ್ಮಿಕ ಪ್ರಜ್ಞೆ ಮೂಡಿಸುವ ಜೊತೆಗೆ ಹಿಂದೂ ಸಮಾಜದ ಒಟ್ಟುಗೂಡುವುದಕ್ಕೆ ಸಹಕಾರಿಯಾಗಿದೆ.ಆಧ್ಯಾತ್ಮಿಕ ಬದುಕು ನಡೆಸುವ ಮೂಲಕ ಹಿಂದೂ ಸಮಾಜದ ವಿಚಾರಗಳು ಜಗತ್ತಿಗೆ ಮಾರ್ಗದರ್ಶನವಾಗಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ ಹಿಂದೂ ಧರ್ಮದ ಎಲ್ಲಾ ಹಬ್ಬಗಳ ಆಚರಣೆಗಳಲ್ಲಿ ಉದಾತ್ತವಾದ ಮೌಲ್ಯಗಳಿವೆ.ನೈಜವಾಗಿ ಆಚರಣೆಯಲ್ಲಿ ತೊಡಗಿದಾಗ ಮಾತ್ರ ನಮ್ಮ ದೇವರ ಅನುಗ್ರಹ ಸಾಧ್ಯ ಎಂದರು.


ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಗೌರವಾಧ್ಯಕ್ಷರಾದ ನನ್ಯ ಅಚ್ಚುತ ಮೂಡಿತ್ತಾಯ ಸಮಾಜವನ್ನು ಒಗ್ಗೂಡಿಸುವದೋಸ್ಕರ ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕರು ಆರಂಭಿಸಿದ್ದು, ಈಗ ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ.ಕಾವು ಸಾರ್ವಜನಿಕ ಗಣೇಶೋತ್ಸವ ಸಮಿತಿಯು ಸುಮಾರು 40 ವರ್ಷಗಳಿಂದ ಗಣೇಶೋತ್ಸವವನ್ನು ವರ್ಷದಿಂದ ವರ್ಷಕ್ಕೆ ಭಕ್ತರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದು ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದರು.


ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಾರ್ಷಿಕ ವರದಿ ವಾಚಿಸಿದರು,ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ ಕಾರ್ಯಕ್ರಮ ನಿರ್ವಹಿಸಿದರು,


ಭಜನಾ ಸೇವಾ ಕಾರ್ಯಕ್ರಮ
ವಿಗ್ರಹ ಪ್ರತಿಷ್ಠೆ,ಗಣಹೋಮದ ಬಳಿಕ ತುಡರ್ ಭಜನಾ ಸಂಘ ನನ್ಯ ಕಾವು,ದುರ್ಗಾವಾಹಿನಿ ಭಜನಾ ಮಂಡಳಿ ಮಾಣಿಯಡ್ಕ, ಗೆಳೆಯರ ಬಳಗ ಕಾವು, ಪಂಚಲಿಂಗೇಶ್ವರ ಭಜನಾ ಸಂಘ ಅಮ್ಚಿನಡ್ಕ,ವಾಗ್ದೇವಿ ಮಾತೃ ಭಜನಾ ಸಂಘ ಇವರ ವತಿಯಿಂದ ಭಜನಾ ಸೇವಾ ಕಾರ್ಯಕ್ರಮ ನಡೆಯಿತು


ಬಹುಮಾನ ವಿತರಣೆ, ಗೌರವಾರ್ಪಣೆ
ಶ್ರೀಕ್ರಷ್ಣ ಜನ್ಮಾಷ್ಟಮಿ ದಿನದಂದು ಸಮಿತಿಯ ವತಿಯಿಂದ ಪುರುಷರು,ಮಹಿಳೆಯರು,ಪ್ರಾಥಮಿಕ ಹಂತ, ಪ್ರೌಢ ಹಂತ ,ಪಿ ಯು ಸಿ ವಿಭಾಗ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಆಯೋಜಿಸಿದ ಕ್ರೀಡಾಕೂಟದ ಬಹುಮಾನ ವಿತರಣೆ ಸಭಾ ಕಾರ್ಯಕ್ರಮದಲ್ಲಿ ನಡೆಯಿತು.ಬಹುಮಾನದ ಪಟ್ಟಿಯನ್ನು ಸಮಿತಿ ಸದಸ್ಯರಾದ ದಿವ್ಯಪ್ರಸಾದ್ ಎ ಎಂ ವಾಚಿಸಿದರು.ಹಾಗೂ ಗಣೇಶೋತ್ಸವಕ್ಕೆ ಗಣೇಶ ವಿಗ್ರಹ ದಾನಿಗಳಾಗಿ ಸಹಕರಿಸಿದ ಹೆಚ್. ಶಿವಪ್ಪ ನಾಯ್ಕ ಸಸ್ಪೆಟ್ಟಿ ಇವರಿಗೆ ಶಾಲು ಹಾಕಿ,ಸ್ಮರಣಿಕೆ ನೀಡಿ,ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.


ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ,ಶೋಭಾಯಾತ್ರೆಗೆ ಮೆರುಗು ನೀಡಿದ ಕುಣಿತ ಭಜನೆ
ಸಂಜೆ 3.30 ಗಂಟೆಗೆ ಭಗವಾಧ್ವಜಾವರೋಹಣ ನಡೆಯಿತು, ಧ್ವಜಾವರೋಹಣವನ್ನು ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮುಡಿತ್ತಾಯ ನೆರವೇರಿಸಿದರು. ನಂತರ
ದೇವಾಲಯದಲ್ಲಿ ಪೂಜಿಸಲ್ಪಟ್ಟ ಗಣೇಶ ವಿಗ್ರಹದ ಆಕರ್ಷಕ ಶೋಭಾಯಾತ್ರೆಯು ನಡೆಯಿತು.ಶೋಭಾಯಾತ್ರೆಯಲ್ಲಿ ದುರ್ಗಾವಾಹಿನಿ ಭಜನಾ ಸಂಘದ ಸದಸ್ಯರಿಂದ ಮತ್ತು ತುಡರ್ ಮಕ್ಕಳ ಭಜನಾ ಸಂಘದಿಂದ ನೃತ್ಯ ಭಜನೆ ಹಾಗೂ ಹುಲಿ ವೇಷ,ಗೊಂಬೆ ಕುಣಿತ ಶೋಭಾಯಾತ್ರೆಗೆ ಮೆರುಗು ನೀಡಿತು. ಶೋಭಾಯಾತ್ರೆಯು ಕಾವು ಪಂಚವಟಿ ನಗರ ,ಕಾವು ಶಿವಪೇಟೆ ಯ ಮೂಲಕ ಸಾಗಿ ಆಮ್ಚಿನಡ್ಕ ಸೀರೆ ಹೊಳೆಯಲ್ಲಿ ಜಲಸ್ಥಂಭನಗೊಳಿಸಲಾಯಿತು.

LEAVE A REPLY

Please enter your comment!
Please enter your name here