ಪುತ್ತೂರು: ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಕಛೇರಿಯ ಎ.ಪಿ.ರೈ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಭಟ್ ಎಂ.ರವರು 2021-22ನೇ ಸಾಲಿನ ವರದಿ ವಾಚಿಸಿದರು. ಲೆಕ್ಕಪರಿಶೋಧನಾ ವರದಿ, ಅನುಪಾಲನಾ ವರದಿ ಮಂಡಿಸಿದರು. ಬಳಿಕ 2023-24ನೇ ಸಾಲಿನ ಕಾರ್ಯಯೋಜನೆಗಳನ್ನು ತಿಳಿಸಿದರು. ಪ್ರಸ್ತುತ ಸಾಲಿನಲ್ಲಿ ಶೇ.17 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದರು. ಸಂಘದ ಅಧ್ಯಕ್ಷ ಟಿ.ವಿ.ರವೀಂದ್ರನ್ 2022-23ನೇ ಸಾಲಿನ ವರದಿ ಮಂಡಿಸಿ ಮಾತನಾಡಿ ಪುತ್ತೂರು ಕೈಗಾರಿಕಾ ಸಂಘದ ಮೂಲಕ ಸ್ಥಾಪಿಸಲ್ಪಟ್ಟ ಸಂಸ್ಥೆಯು 1988ರಿಂದ ಕಾರ‍್ಯಾರಂಭ ಮಾಡಿದೆ. ಸಂಘದ ಸದಸ್ಯರಿಗೆ, ಕೈಗಾರಿಕೋದ್ಯಮಿಗಳಿಗೆ, ಸಣ್ಣ ಕೈಗಾರಿಕೆ ಸ್ಥಾಪಿಸಲು, ನಡೆಸಲು, ಅಭಿವೃದ್ಧಿ ಪಡಿಸಲು ಸಹಾಯ ಒದಗಿಸುವುದು ಸಂಘದ ಉದ್ಧೇಶವಾಗಿದೆ. ಸಂಘವು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕುಗಳ ವ್ಯಾಪ್ತಿಯನ್ನು ಹೊಂದಿದ್ದು ರೂ.32,49,400 ಪಾಲು ಬಂಡವಾಳ ಮತ್ತು ರೂ.5,35,08,330.52 ಠೇವಣಾತಿ ಹೊಂದಿದೆ ಎಂದು ಹೇಳಿದರು. ಸಂಘಕ್ಕೆ 2022-23ನೇ ಸಾಲಿನಲ್ಲಿ ರೂ.12,53,460.98 ಲಾಭಾಂಶ ಬಂದಿದ್ದು ಸಂಘ ಎ. ಶ್ರೇಣಿಯನ್ನು ಹೊಂದಿದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡೆನ್ನಿಸ್ ಮಸ್ಕರೇನಸ್ ನನ್ನ ಉದ್ಯಮಕ್ಕೆ ಸಂಘ ಸಹಾಯ ಮಾಡಿದೆ. ನನ್ನ ಉದ್ಯಮ ಅಭಿವೃದ್ಧಿ ಹೊಂದಲು ಸಿಡ್ಕೋ ಕಾರಣವಾಗಿದೆ. ಎಂದು ಹೇಳಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಸದಸ್ಯರ ಪರವಾಗಿ ಜಾನ್ ಕುಟಿನ್ಹಾ ಮಾತನಾಡಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಹಕರಿಗೆ ಸ್ಪಂದನೆ ಕೊಡುತ್ತಿದ್ದಾರೆ ಎಂದು ಹೇಳಿ ಶ್ಲಾಘಿಸಿದರು. ಸೇಡಿಯಾಪು ವಿಶ್ವಪ್ರಸಾದ್ ಮಾತನಾಡಿ ಸಹಾಯ ಮಾಡಿದವರನ್ನು ನೆನಪು ಮಾಡಿಕೊಳ್ಳುವುದು, ಗೌರವಿಸುವುದು ಒಳ್ಳೆಯ ಕೆಲಸ. ಇದರಿಂದ ಸಂಬಂಧಗಳು ಉಳಿಯುತ್ತದೆ ಎಂದರು. ನಿರ್ದೇಶಕ ಗಿರೀಶ್ ಭಾರಧ್ವಾಜ್ ಮಾತನಾಡಿ ಸಂಘಕ್ಕೆ ಕೊಡುಗೆಯಾಗಿ ನೀಡಿ ಸಂಘದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಕಳೆದ ಸಾಲಿನಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಿರ್ದೇಶಕರಾದ ಪ್ರೇಮಾನಂದ ಡಿ., ರವಿರಾಜ ಭಟ್, ಸುಧೀರ್ ಶೆಟ್ಟಿ ಪಿ., ಕೇಶವ ಬಿ., ಸುರೇಖಾ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿ ಜಗದೀಶ, ಪಿಗ್ಮಿ ಸಂಗ್ರಾಹಕ ಮುರಳಿ ಸಹಕರಿಸಿದರು. ನಿರ್ದೇಶಕಿ ಮೀನಾಕ್ಷಿ ಮಂಜುನಾಥ್ ಪ್ರಾರ್ಥಿಸಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ಮೋಹನ್ ಕುಮಾರ್ ಬೊಳ್ಳಾಡಿ ವಂದಿಸಿದರು. ಲೆಕ್ಕಿಗ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.
ದಾನಿಗಳಿಗೆ ಗೌರವಾರ್ಪಣೆ
ಸಂಘಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ರೂ.67 ಸಾವಿರ ವೆಚ್ಚದಲ್ಲಿ ಸಂಘಕ್ಕೆ ಬೇಕಾದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ ಸಂಘದ ಸದಸ್ಯ ಡೆನ್ನಿಸ್ ಮಸ್ಕರೇನಸ್ ದಂಪತಿ ಹಾಗೂ ರೂ.1೦೦೦೦ ವೆಚ್ಚದಲ್ಲಿ ಇನ್‌ವರ್ಟರ್ ಬಾಕ್ಸ್ ಕೊಡುಗೆಯಾಗಿ ನೀಡಿದ ಸದಸ್ಯ ಮೆಲ್ವಿನ್ ಮಸ್ಕರೇನಸ್‌ರವರನ್ನು ಗೌರವಿಸಿದರು. ರೂ.5೦೦೦೦ ವೆಚ್ಚದಲ್ಲಿ ಸಂಘದ ಕಚೇರಿಗೆ ಪೈಂಟಿಗ್ ಮಾಡಿಸಿದ ಸಂಘದ ಅಧ್ಯಕ್ಷ ಟಿ.ವಿ.ರವೀಂದ್ರನ್‌ರವರನ್ನು ಸಂಘದ ಸದಸ್ಯರು ಸನ್ಮಾನಿಸಿದರು.