ವಿಟ್ಲ: ಇಂದು ಹಿಂದಿ ಕೇವಲ ಭಾಷೆಯಾಗಿರದೇ ಜಗತ್ತಿನ 137 ದೇಶಗಳಲ್ಲಿ ವ್ಯವಹಾರಿಕವಾಗಿ ಮುಂಚೂಣಿಯಲ್ಲಿರುವ, ಕೇಂದ್ರೀಯ ಭಾಷಾ ಸಂಸ್ಥಾನ, ಬ್ಯಾಂಕಿಂಗ್, ವರದಿಗಾರಿಕೆ, ಭಾಷಾಂತರಕಾರ ಹಾಗೂ ಇನ್ನಿತರ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗ ಒದಗಿಸಬಲ್ಲ ಕೌಶಲ್ಯವಾಗಿದೆ ಎಂದು ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಇದರ ಹಿಂದಿ ಶಿಕ್ಷಕರಾದ ಇಮ್ತಿಯಾಜ್ ರವರು ಹೇಳಿದರು.
ಅವರು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆ ಎಸ್. ಎಸ್. ಎಲ್. ಸಿ. ಟಾಪರ್ ಆಯಿಷತ್ ರಂಷೀನರವರನ್ನು ಸನ್ಮಾನಿಸಲಾಯಿತು. ಹಿಂದಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 15 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಹಿಂದಿಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ ರವರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ಚೆನ್ನಪ್ಪ ಗೌಡ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ, ಹಿಂದಿ ಶಿಕ್ಷಕಿ ಪವಿತ್ರ ಎ.ಜಿ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ, ಹಿರಿಯ ಶಿಕ್ಷಕಿ ಐ.ಜಯಲಕ್ಷ್ಮೀ, ಶ್ಯಾಮಲಾ ಕೆ.,ಗಂಗಾಧರ ಗೌಡ, ಸುಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ವಾರ್ಷಿಕ ವರದಿಯೊಂದಿಗೆ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕುಮಾರಿ ರಫೀದ ವಂದಿಸಿ, ಹಿಂದಿ ಸಂಘದ ಅಧ್ಯಕ್ಷೆ ಫಾತಿಮಾ ಅಂಜುಮ್ ಮತ್ತು ಸದಸ್ಯೆ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಫಾತಿಮತ್ ಸಾರಾ ಶೈಬಾ, ಫಾತಿಮಾತ್ ಸನ, ಮರಿಯಮತ್ ರಾಯಿಸಾ, ಮಂಜುನಾಥ ಸಹಕರಿಸಿದರು.