ಪಿಂಚಣಿ ಫಲಾನುಭವಿಗಳು ಸೆಪ್ಟೆಂಬರ್ 30ರೊಳಗೆ ಉಳಿತಾಯ ಖಾತೆಗೆ ಆಧಾರ್ ನಂಬರ್ ಜೋಡಣೆ NPCI ಮ್ಯಾಪಿಂಗ್ ಮಾಡುವಂತೆ ತಹಶೀಲ್ದಾರರ ಸೂಚನೆ

0
Birbhum, West Bengal / India - 18th August 2020: Aadhaar cards of India on brown wooden table

ಪುತ್ತೂರು : ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುವ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾಸುರಕ್ಷಾ ವೇತನ, ಮನಸ್ವಿನಿ ವೇತನ, ಎಂಡೋಸಲ್ಫಾನ್ ಮಿತಿವೇತನ ಪಿಂಚಣಿಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯನ್ನಾಗಿ ತರಲು ತಿರ್ಮಾನಿಸಿದ್ದು, ಸದ್ರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಪಿಂಚಣಿ, ಫಲಾನುಭವಿಗಳ ಬ್ಯಾಂಕ್/ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ NPCI ಲಿಂಕ್ ಮಾಡಬೇಕಾಗಿರುತ್ತದೆ.

ಆಧಾರ್ ಜೋಡಣೆ ಮಾಡದಿದ್ದಲ್ಲಿ ಅಕ್ಟೋಬರ್ ತಿಂಗಳ ಪಿಂಚಣಿ ಸ್ಥಗಿತಗೊಳ್ಳಲಿದೆ. ಪಿಂಚಣಿ ಜಮೆಯಾಗುತ್ತಿರುವ ಬ್ಯಾಂಕ್/ ಪೋಸ್ಟ್ ಅಫೀಸ್ ಉಳಿತಾಯ ಖಾತೆಗೆ ಆಧಾರ್ ಜೋಡಣೆಯಾಗದಿರುವ ಪ್ರಕರಣಗಳ ಪಟ್ಟಿಯನ್ನು ಗ್ರಾಮದ ವ್ಯಾಪ್ತಿಗೆ ಬರುವ ಗ್ರಾಮ ಅಡಳಿತ ಅಧಿಕಾರಿಯವರ ಕಚೇರಿಗೆ ಭೇಟಿ ನೀಡಿ ಸದ್ರಿ ಪಟ್ಟಿಯನ್ನು ಪರಿಶೀಲಿಸಿಕೊಂಡು ಸಪ್ಟೆಂಬರ್ 30ರೊಳಗೆ ಸಂಬಂಧಪಟ್ಟ ಬ್ಯಾಂಕ್ / ಪೋಸ್ಟ್ ಅಫೀಸ್ ಉಳಿತಾಯ ಖಾತೆಗೆ ಆಧಾರ್ ನಂಬರ್ ಜೋಡಣೆ, NPCI ಮ್ಯಾಪಿಂಗ್ ಮಾಡಬೇಕೆಂದು ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here